ಟ್ವಿಟರ್ ಯಾಕೆ ಉಚಿತ ಸೇವೆ ನೀಡುತ್ತಿದೆ..? ಇಂತಹ ಪ್ರಶ್ನೆ ಎಂದಾದರೂ ನಿಮ್ಮ ಮನಸ್ಸಿನಲ್ಲಿ ಮೂಡಿದೆಯೇ..? ಹಾಗಾದ್ರೆ ಇನ್ಮುಂದೆ ಇಂತಹ ಪ್ರಶ್ನೆಯನ್ನ ಕೇಳುವ ಸಂದರ್ಭವೇ ಬರೋದಿಲ್ಲ.
ತನ್ನ ಅಪ್ಲಿಕೇಶನ್ನಲ್ಲಿ ಹೊಸದೊಂದು ಸೌಕರ್ಯವನ್ನ ಪರಿಚಯಿಸಿರುವ ಟ್ವಿಟರ್ ಇದಕ್ಕೆ ಸೂಪರ್ ಫಾಲೋವ್ಸ್ ಎಂದು ಹೆಸರಿಟ್ಟಿದೆ. ಇದರ ಅಡಿಯಲ್ಲಿ ಫಾಲೋವರ್ಸ್ ಇನ್ಮುಂದೆ ಹಣವನ್ನ ನೀಡಿ ಬೋನಸ್ ಟ್ವೀಟಿ, ಕಮ್ಯೂನಿಟಿ ಗ್ರೂಪ್ ಹಾಗೂ ನ್ಯೂಸ್ ಲೆಟರ್ಗಾಗಿ ಹಣವನ್ನ ಚಾರ್ಜ್ ಮಾಡಬಹುದಾಗಿದೆ.
ಫೇಸ್ಬುಕ್, ಯುಟ್ಯೂಬ್ ಹಾಗೂ githubಗಳಲ್ಲಿ ಬಳಕೆದಾರರಿಗೆ ಹಣ ಗಳಿಸುವ ಆಯ್ಕೆಯನ್ನ ಈ ಹಿಂದೆಯೇ ನೀಡಲಾಗಿದೆ. ಇದೀಗ ಟ್ವಿಟರ್ ಕೂಡ ತನ್ನ ಬಳಕೆದಾರರಿಗೆ ಈ ಹೊಸ ಅವಕಾಶವನ್ನ ಮಾಡಿಕೊಟ್ಟಿದೆ.
ಈ ಸೌಕರ್ಯದ ಸಹಾಯದಿಂದ ಸುದ್ದಿ ನೀಡುವ ಮಾಧ್ಯಮಗಳು ಹಾಗೂ ವ್ಯಕ್ತಿಗಳು ಹಣವನ್ನ ಸಂಪಾದನೆ ಮಾಡಬಹುದಾಗಿದೆ. ಆದರೆ ಯಾವ ಪ್ರತಿಶತದಲ್ಲಿ ಟ್ವಿಟರ್ ಈ ಹಣವನ್ನ ಹಂಚಿಕೆ ಮಾಡಿಕೊಳ್ಳಲಿದೆ ಅನ್ನೋದ್ರ ಬಗ್ಗೆ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.