alex Certify ಟ್ವಿಟ್ಟರ್ ಬಳಕೆದಾರರೇ ಗಮನಿಸಿ: ಮುಂದಿನ ವರ್ಷದಿಂದ ಬದಲಾಗಲಿದೆ ಈ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟ್ಟರ್ ಬಳಕೆದಾರರೇ ಗಮನಿಸಿ: ಮುಂದಿನ ವರ್ಷದಿಂದ ಬದಲಾಗಲಿದೆ ಈ ನಿಯಮ

ಟ್ವಿಟರ್​ ಸಂಸ್ಥೆಯ ನೂತನ ಪರಿಶೀಲನಾ ನೀತಿಯನ್ನ ಜನವರಿ 20ರಿಂದ ಜಾರಿಗೆ ತರಲಾಗುವುದು ಅಂತಾ ಟ್ವಿಟರ್​ ಇಂಡಿಯಾ ಹೇಳಿದೆ. ಪ್ರತಿಯೊಂದು ಖಾತೆಯನ್ನ ಪರಿಶೀಲಿಸಿದ ಬಳಿಕ ನಿಷ್ಕ್ರಿಯ ಹಾಗೂ ಅಪೂರ್ಣ ಖಾತೆಗಳನ್ನ ತೆಗೆದು ಹಾಕಲಾಗುತ್ತೆ ಎಂದು ಟ್ವಿಟರ್ ಇಂಡಿಯಾ ಹೇಳಿದೆ.
ಟ್ವಿಟರ್​ನ ಹೊಸ ನೀತಿಯ ಅಡಿಯಲ್ಲಿ ಟ್ವಿಟರ್​ ನಿಯಮಗಳನ್ನ ಪದೇ ಪದೇ ಉಲ್ಲಂಘನೆ ಮಾಡಿದ ಖಾತೆಗಳಿಗೂ ಕಂಟಕ ಎದುರಾಗಲಿದೆ. ನಾವು ಅಂತಹ ಖಾತೆಗಳನ್ನ ಕೇಸ್​ ಬೈ ಕೇಸ್​ ಆಧಾರದ ಮೇಲೆ ಪರಿಶೀಲನೆ ಮಾಡಲಿದ್ದೇವೆ. ಟ್ವಿಟರ್​ ನಿಯಮ ಹಾಗೂ ಪರಿಶೀಲನಾ ನಿಯಮಗಳ ಬಗ್ಗೆ 2021ರಿಂದ ಸುಧಾರಣೆ ತರಲಿದ್ದೇವೆ ಎಂದು ಹೇಳಿದೆ.
ಹೊಸ ನೀತಿಯ ಅಡಿಯಲ್ಲಿ ನಿಮ್ಮ ಖಾತೆ ಪರಿಶೀಲನಾ ಬ್ಯಾಡ್ಜ್​ ಕಳೆದುಕೊಳ್ಳುವ ಅಪಾಯದಲ್ಲಿದ್ದರೆ, ಈ ಬ್ಯಾಡ್ಜ್​ನ್ನ ನೀವು ಹೇಗೆ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ನಿಮಗೆ ಇ ಮೇಲ್​ ಇಲ್ಲವೇ ಟ್ವಿಟರ್​ ಅಪ್ಲಿಕೇಶನ್​ನಲ್ಲಿಯೇ ಅಧಿಸೂಚನೆ ನೀಡಲಿದ್ದೇವೆ ಎಂದು ಟ್ವಿಟರ್​ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...