ಟ್ವಿಟರ್ ಸಂಸ್ಥೆಯ ನೂತನ ಪರಿಶೀಲನಾ ನೀತಿಯನ್ನ ಜನವರಿ 20ರಿಂದ ಜಾರಿಗೆ ತರಲಾಗುವುದು ಅಂತಾ ಟ್ವಿಟರ್ ಇಂಡಿಯಾ ಹೇಳಿದೆ. ಪ್ರತಿಯೊಂದು ಖಾತೆಯನ್ನ ಪರಿಶೀಲಿಸಿದ ಬಳಿಕ ನಿಷ್ಕ್ರಿಯ ಹಾಗೂ ಅಪೂರ್ಣ ಖಾತೆಗಳನ್ನ ತೆಗೆದು ಹಾಕಲಾಗುತ್ತೆ ಎಂದು ಟ್ವಿಟರ್ ಇಂಡಿಯಾ ಹೇಳಿದೆ.
ಟ್ವಿಟರ್ನ ಹೊಸ ನೀತಿಯ ಅಡಿಯಲ್ಲಿ ಟ್ವಿಟರ್ ನಿಯಮಗಳನ್ನ ಪದೇ ಪದೇ ಉಲ್ಲಂಘನೆ ಮಾಡಿದ ಖಾತೆಗಳಿಗೂ ಕಂಟಕ ಎದುರಾಗಲಿದೆ. ನಾವು ಅಂತಹ ಖಾತೆಗಳನ್ನ ಕೇಸ್ ಬೈ ಕೇಸ್ ಆಧಾರದ ಮೇಲೆ ಪರಿಶೀಲನೆ ಮಾಡಲಿದ್ದೇವೆ. ಟ್ವಿಟರ್ ನಿಯಮ ಹಾಗೂ ಪರಿಶೀಲನಾ ನಿಯಮಗಳ ಬಗ್ಗೆ 2021ರಿಂದ ಸುಧಾರಣೆ ತರಲಿದ್ದೇವೆ ಎಂದು ಹೇಳಿದೆ.
ಹೊಸ ನೀತಿಯ ಅಡಿಯಲ್ಲಿ ನಿಮ್ಮ ಖಾತೆ ಪರಿಶೀಲನಾ ಬ್ಯಾಡ್ಜ್ ಕಳೆದುಕೊಳ್ಳುವ ಅಪಾಯದಲ್ಲಿದ್ದರೆ, ಈ ಬ್ಯಾಡ್ಜ್ನ್ನ ನೀವು ಹೇಗೆ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ನಿಮಗೆ ಇ ಮೇಲ್ ಇಲ್ಲವೇ ಟ್ವಿಟರ್ ಅಪ್ಲಿಕೇಶನ್ನಲ್ಲಿಯೇ ಅಧಿಸೂಚನೆ ನೀಡಲಿದ್ದೇವೆ ಎಂದು ಟ್ವಿಟರ್ ಹೇಳಿದೆ.
ಟ್ವಿಟ್ಟರ್ ಬಳಕೆದಾರರೇ ಗಮನಿಸಿ: ಮುಂದಿನ ವರ್ಷದಿಂದ ಬದಲಾಗಲಿದೆ ಈ ನಿಯಮ
18-12-2020 3:28PM IST / No Comments / Posted In: Business, Latest News