ನವದೆಹಲಿ: ಏಪ್ರಿಲ್ ನಿಂದ ಎಲ್ಇಡಿ ಟಿವಿ ಬೆಲೆ ದುಬಾರಿಯಾಗಲಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಓಪನ್ ಸೆಲ್ ಪ್ಯಾನಲ್ ಗಳ ದರ ಶೇಕಡ 35 ರಷ್ಟು ಹೆಚ್ಚಳವಾಗಿದೆ. ಇದರ ಪರಿಣಾಮ ಎಲ್ಇಡಿ ಟಿವಿ ಗಳ ಬೆಲೆ ಏಪ್ರಿಲ್ ನಿಂದ ಏರಿಕೆಯಾಗಲಿದೆ.
ಪ್ಯಾನಾಸೋನಿಕ್, ಹೈಯರ್ ಮತ್ತು ಥಾಮ್ಸನ್ ಕಂಪನಿಗಳು ಟಿವಿ ಬೆಲೆ ಏರಿಕೆಗೆ ಚಿಂತನೆ ನಡೆಸಿವೆ. ಶೇಕಡ 5 ರಿಂದ 7 ರಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ. 32 ಇಂಚಿನ ಟಿವಿ ಬೆಲೆ ಸುಮಾರು 5 ಸಾವಿರ ರೂನಿಂದ 7 ಸಾವಿರ ರೂಪಾಯಿವರೆಗೆ ಹೆಚ್ಚಳವಾಗಬಹುದು ಎಂದು ಹೇಳಲಾಗಿದೆ.