ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಈಗಾಗಲೇ ಅನೇಕ ಪರಿಸರ ಸ್ನೇಹಿ ದೀಪಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ ಎಂಬಂತೆ ತ್ರಿಪುರದಲ್ಲಿ ಬಿದಿರಿನ ದೀಪಗಳು ತಯಾರಾಗುತ್ತಿವೆ.
ಸೆಪಾಹಿಜಾಲಾ ಜಿಲ್ಲೆಯ ಮಹಿಳಾ ಸ್ವ ಸ್ವಹಾಯ ಸಂಘ ಈ ಪರಿಸರ ಸ್ನೇಹಿ ಹಣತೆಗಳನ್ನ ತಯಾರಿಸುತ್ತಿವೆ. ಈ ದೀಪಗಳನ್ನ ತ್ರಿಪುರ ಸಿಎಂ ಬಿಪ್ಲಬ್ ಕುಮಾರ್ ದೇಬ್ ಲೋಕಾರ್ಪಣೆ ಮಾಡಿದ್ದಾರೆ. ಪ್ರಧಾನಿ ಮೋದಿ ಕರೆ ನೀಡಿದ ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಈ ಹಣತೆಗಳು ಮತ್ತೊಂದು ಸೇರ್ಪಡೆಯಾಗಿವೆ.
ಬಿದಿರಿನ ಮೂಲಕ ತಯಾರಾದ ಬಾಟಲಿಗಳು, ಅಕ್ಕಿ ಸೇರಿದಂತೆ ಅನೇಕ ವಸ್ತುಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ಇದೀಗ ಈ ಸಾಲಿಗೆ ಹಣತೆ ಕೂಡ ಸೇರಿದೆ.
ಈ ವಿಚಾರವಾಗಿ ಮಾತನಾಡಿದ ಸಿಎಂ ದೇಬ್, ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್ನಲ್ಲಿ ಬಿದಿರಿನ ಬಳಕೆ ಬಗ್ಗೆ ಸಲಹೆ ನೀಡಿದ್ದರು. ಇದರಿಂದ ಸ್ಪೂರ್ತಿ ಪಡೆದ ಮಹಿಳೆಯರು ಈ ವಿಶಿಷ್ಟ ಪ್ರಯತ್ನ ಮಾಡಿ ಅದರಲ್ಲಿ ಯಶಸ್ವಿಯಾಗ್ತಿದ್ದಾರೆ ಅಂತಾ ಹೇಳಿದ್ರು.