ಕೋಲಾರ: ಕಳೆದ ನಾಲ್ಕೈದು ತಿಂಗಳಿನಿಂದ ಬೇಡಿಕೆ ಇಲ್ಲದೆ ಕುಸಿತ ಕಂಡಿದ್ದ ಟೊಮೆಟೊ ದರ ದಿಢೀರ್ ಏರಿಕೆ ಕಂಡಿದೆ.
ದರ ಕುಸಿತದಿಂದ ಕಂಗಾಲಾಗಿದ್ದ ಬೆಳೆಗಾರರು ಈಗ ದರ ಏರಿಕೆಯಾಗುತ್ತಿರುವುದದಿಂದ ಖುಷಿಯಾಗಿದ್ದಾರೆ. ಕೋಲಾರ ಜಿಲ್ಲೆಯ ಮಾರುಕಟ್ಟೆಗೆ ಹೊರರಾಜ್ಯಗಳ ವ್ಯಾಪಾರಿಗಳು ಬಂದು ಟೊಮೆಟೊ ಖರೀದಿಸುತ್ತಿದ್ದಾರೆ. 15 ಕೆಜಿ ಬಾಕ್ಸ್ ಗೆ 400 ರಿಂದ 800 ರೂ.ವರೆಗೂ ಮಾರಾಟವಾಗುತ್ತಿದೆ.
ಎರಡು ತಿಂಗಳ ಹಿಂದೆಯಷ್ಟೇ ಟೊಮೆಟೊ ದರ ಕುಸಿತವಾಗಿದ್ದರಿಂದ ರೈತರು ಬೆಳೆ ಕಟಾವು ಮಾಡಿರಲಿಲ್ಲ. ಅಕಾಲಿಕ ಮಳೆಯಿಂದ ಬೆಳೆ ನಾಶವಾಗಿದ್ದು, ಹೊರರಾಜ್ಯದ ವ್ಯಾಪಾರಿಗಳು ಬಾರದ ಕಾರಣ ಬೆಲೆ ಕುಸಿತವಾಗಿತ್ತು. ಈಗ ಬೆಳೆ ಕಡಿಮೆ ಇರುವುದರಿಂದ ಟೊಮೆಟೊ ದರ ದಿಢೀರ್ ಏರಿಕೆ ಕಂಡಿದೆ. ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಟೊಮೆಟೊ ದರ ದಿನೇ ದಿನೇ ಏರಿಕೆಯಾಗುತ್ತಿರುವುದರಿಂದ ಗ್ರಾಹಕರಿಗೆ ನುಂಗಲಾದ ತುತ್ತಾಗಿದೆ. ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಟೊಮೆಟೊ ದರ ಏರಿಕೆಯ ಬಿಸಿ ತಟ್ಟಿದೆ.