
ಕೊಪ್ಪಳ: ದೇಶದ ವಿವಿಧೆಡೆ ಟೊಮೆಟೊ ದರ 100 ರೂ.ಗಿಂತಲೂ ಹೆಚ್ಚಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಸೋಮವಾರ ಒಂದು ಕೆಜಿ ಟೊಮೆಟೊ 180 ರೂ. ವರೆಗೆ ಮಾರಾಟವಾಗಿದ್ದು, 200 ರೂಪಾಯಿ ಗಡಿ ತಲುಪಿದೆ.
ಕೊಪ್ಪಳ, ಕನಕಗಿರಿ ಎಪಿಎಂಸಿ ಮಾರುಕಟ್ಟೆಯಲ್ಲಿ 22 ಕೆಜಿ ಟೊಮೆಟೊ ಬಾಕ್ಸ್ ದರ 2500 ರೂ.ನಿಂದ 2,900 ರೂ.ವರೆಗೆ ಮಾರಾಟವಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಟೊಮೆಟೊ 180 ರೂ.ಗೆ ಮಾರಾಟವಾಗಿದೆ. ಜಿಲ್ಲೆಗೆ ಇಷ್ಟೊಂದು ದರಕ್ಕೆ ಟೊಮೆಟೊ ಮಾರಾಟವಾಗಿರುವುದು ಇದೇ ಮೊದಲು ಎಂದು ಹೇಳಲಾಗಿದೆ.