ಬೆಂಗಳೂರು: ಟೊಮೆಟೊ ದರ ಭಾರಿ ಕುಸಿತ ಕಂಡಿದ್ದು, ಗ್ರಾಹಕರಿಗೆ ಖುಷಿ ತಂದಿದೆ. ಆದರೆ, ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ.
ಕೆಜಿಗೆ 300 ರೂ.ವರೆಗೂ ಟೊಮೆಟೊ ದರ ಏರಿಕೆ ಕಂಡಿದ್ದು, ಗ್ರಾಹಕರು ಕಂಗಾಲಾಗಿದ್ದರೆ ಬೆಳೆಗಾರರು, ಲಕ್ಷಾಧೀಶರು, ಕೋಟ್ಯಧಿಪತಿಗಳಾಗಿದ್ದರು. ಈಗ ಏಕಾಏಕಿ ಟೊಮೆಟೊ ದರ ಕುಸಿತ ಕಾಣುತ್ತಿದೆ.
ಉತ್ತರ ರಾಜ್ಯಗಳಲ್ಲಿ ಬೇಡಿಕೆ ಕಡಿಮೆಯಾಗಿರುವುದರಿಂದ ಟೊಮೇಟೊ ಬೆಲೆ ಇಳಿಕೆಯಾಗಿದೆ. ಅಲ್ಲದೇ ನೇಪಾಳದಿಂದಲೂ ಟೊಮೆಟೊ ಆಮದಾಗುತ್ತಿದೆ. ಉತ್ತರ ಭಾರತದಲ್ಲಿ ಟೊಮೆಟೊ ಪೂರೈಕೆ ಹೆಚ್ಚಾಗಿರುವುದರಿಂದ ಟೊಮೆಟೊಗೆ ಬೇಡಿಕೆ ಕಡಿಮೆಯಾಗಿದೆ. ಸಗಟು ದರ ಪ್ರತಿ ಕೆಜಿಗೆ 5-10 ರೂ.ಗೆ ಕುಸಿತವಾಗಬಹುದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಟೊಮೆಟೊ ದರ ದಿನೇ ದಿನೇ ಕಡಿಮೆಯಾಗಿದೆ. ಮೈಸೂರು ಎಪಿಎಂಸಿಯಲ್ಲಿ ಟೊಮೆಟೊ ದರ ಕೆಜಿಗೆ 14 ರೂ., ರಾಜ್ಯದ ಬಹುತೇಕ ಭಾಗಗಳಲ್ಲಿ 20 ರೂ. ಇದೆ. ಬೆಂಗಳೂರಿನಲ್ಲಿ 30 ರಿಂದ 35 ರೂ. ದರ ಇದೆ.