ಬೆಂಗಳೂರು: ಶತಕ ಬಾರಿಸಿದ್ದ ಟೊಮೆಟೊ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಕೆಜಿಗೆ 10 ರೂ ನಿಂದ 20 ರೂ. ಗೆ ಮಾರಾಟವಾಗುತ್ತಿದೆ.
ಕಳೆದ ಮೇ, ಜೂನ್ ತಿಂಗಳಲ್ಲಿ ಒಂದು ಕೆಜಿ ಟೊಮೆಟೊ ದರ 100 ರೂಪಾಯಿ ಗಡಿ ದಾಟಿತ್ತು. ಗ್ರಾಹಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ದರ ಏರಿಕೆಯಾಗಿದ್ದ ಸಂದರ್ಭದಲ್ಲಿ ರೈತರ ಜಮೀನುಗಳಲ್ಲಿ ಬೆಳೆ ಇರಲಿಲ್ಲ. ಟೊಮೆಟೊ ದರ ಏರಿಕೆಯಾಗಿದ್ದರಿಂದ ಹೆಚ್ಚಿನ ರೈತರು ಭಾರಿ ಪ್ರಮಾಣದಲ್ಲಿ ಟೊಮೆಟೊ ಬೆಳೆದಿದ್ದಾರೆ. ಈಗ ಟೊಮೆಟೊ ಕೊಯ್ಲಿಗೆ ಬಂದಿದ್ದು, ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ದರ ಇಳಿಕೆಯಾಗಿರುವುದು ಶಾಕ್ ನೀಡಿದೆ.
ಇದಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಮಾರುಕಟ್ಟೆಗೆ ಟೊಮೆಟೊ ಬರಲಾರಂಬಿಸಿದ್ದು, ಬೆಲೆ ಇಳಿಕೆಯಾಗುತ್ತಿದೆ. ಬೆಲೆ ಇಳಿಕೆಯಿಂದ ಗ್ರಾಹಕರು ನಿಟ್ಟಿಸಿರು ಬಿಟ್ಟಿದ್ದಾರೆ. ಆದರೆ, ಭಾರಿ ಪ್ರಮಾಣದಲ್ಲಿ ಬೆಲೆ ಇಳಿಕೆಯಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಮಾರುಕಟ್ಟೆಗೆ ಬಂದಿರುವುದು ಮತ್ತು ಬೇಡಿಕೆ ಕಡಿಮೆಯಾಗಿರುವುದರಿಂದ ಬೆಲೆಗಳು ದಿಢೀರ್ ಇಳಿಕೆ ಕಂಡಿವೆ ಎಂದು ಹೇಳಲಾಗಿದೆ.