ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ದರ ಕುಸಿಯುತ್ತಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಷ್ಯಾದ ಎರಡನೇ ಅತಿ ದೊಡ್ಡ ಟೊಮೆಟೊ ಮಾರಾಟ ಮಾರುಕಟ್ಟೆಯಾಗಿರುವ ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ದರ ಕುಸಿತ ಕಂಡಿದೆ.
15 ಕೆಜಿ ಬಾಕ್ಸ್ ಟೊಮೆಟೊಗೆ ಹರಾಜಿನಲ್ಲಿ ಗರಿಷ್ಠ 200 ರೂಪಾಯಿ ಸಿಗುತ್ತಿದೆ. ಗುಣಮಟ್ಟವಿಲ್ಲದ ಟೊಮೆಟೊ ಕನಿಷ್ಠ 50 ರೂಪಾಯಿಗೆ ಮಾರಾಟವಾಗುತ್ತಿದ್ದು, ಸಾಗಾಣೆ ವೆಚ್ಚ, ಕೂಲಿ, ಕಮಿಷನ್ ಕಳೆದರೆ ರೈತರಿಗೆ ಹಾಕಿದ ಬಂಡವಾಳ ಕೂಡ ಸಿಗದಂತಾಗಿದೆ. ಗ್ರಾಹಕರಿಗೆ ಟೊಮೆಟೊ ದರ ಕಡಿಮೆಯಾಗಿರುವುದು ಖುಷಿ ತಂದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆಜಿ ಟೊಮೆಟೊ 10 -15 ರೂಪಾಯಿಗೆ ಮಾರಾಟವಾಗುತ್ತಿದೆ.
ಕೋಲಾರ ಜಿಲ್ಲೆಯಲ್ಲಿ ಸುಮಾರು 2,500 ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗಿದ್ದು, ಉತ್ಪಾದನೆ ಹೆಚ್ಚಾಗಿದ್ದರೂ ಗುಣಮಟ್ಟ ಇಲ್ಲದ ಕಾರಣ ಹೊರ ರಾಜ್ಯದ ವರ್ತಕರಿಂದ ಬೇಡಿಕೆ ಇಲ್ಲದಂತಾಗಿದೆ. ಹೀಗಾಗಿ ಧಾರಣೆ ದಿನೇ ದಿನೇ ಕುಸಿಯತೊಡಗಿದ್ದು ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ.
ಕಳೆದ ವರ್ಷ ಇದೆ ಅವಧಿಯಲ್ಲಿ 15 ಕೆಜಿ ಬಾಕ್ಸ್ ಗೆ 2000 ರೂ.ವರೆಗೂ ಬೆಲೆ ಇತ್ತು. ಈಗ ಉತ್ತಮ ಗುಣಮಟ್ಟದ ಟೊಮೆಟೊಗೆ ಕನಿಷ್ಠ 200 ರೂ. ಸಿಗುತ್ತಿದೆ ಎನ್ನಲಾಗಿದೆ.