ಗದಗ: ಟೊಮೆಟೊ ದರ ಭಾರಿ ಕುಸಿತವಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ರಸ್ತೆಗೆ ಟೊಮೆಟೊ ಸುರಿದು ಪ್ರತಿಭಟನೆ ನಡೆಸಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಹೊಸ ನಿಲ್ದಾಣದ ಬಳಿ ಟೊಮೆಟೊ ಬೆಳೆಗಾರರು ದಿಢೀರ್ ಬೆಲೆ ಕುಸಿತದ ಹಿನ್ನೆಲೆಯಲ್ಲಿ ರಸ್ತೆಗೆ ಟೊಮೆಟೊ ಸುರಿದು ಪ್ರತಿಭಟನೆ ನಡೆಸಿದರು. 20 ರಿಂದ 30 ಕೆಜಿ ಟೊಮೆಟೊ ಇರುವ ಒಂದು ಬಾಕ್ಸ್ ಗೆ ಕೇವಲ 20 ರಿಂದ 30 ರೂಪಾಯಿ ದರ ನಿಗದಿಪಡಿಸಿ ಮಾರಾಟ ಮಾಡಲಾಗುತ್ತಿದೆ. ಕೆಜಿಗೆ 10 ರಿಂದ 20 ರೂ.ವರೆಗೂ ಇದ್ದ ದರ ಎರಡೇ ದಿನದಲ್ಲಿ ಒಂದು ರೂ.ಗೆ ಕುಸಿದಿದ್ದು ಬೆಳೆಗಾರರಲ್ಲಿ ಆಕ್ರೋಶ ತಂದಿದೆ. ಇದರಿಂದ ಆಕ್ರೋಶಗೊಂಡ ರೈತರು ರಸ್ತೆಗೆ ಟೊಮೆಟೊ ಸುರಿದು ಪ್ರತಿಭಟನೆ ನಡೆಸಿದ್ದಾರೆ.