ಕೋವಿಡ್-19ನಿಂದ ಕಳೆಗುಂದಿರುವ ಬ್ಯುಸಿನೆಸ್‌ಗೆ ಮರುಚೈತನ್ಯ ನೀಡಲು ಮುಂದಾದ ಟೋಕಿಯೋದ ಹೊಟೇಲ್ ಒಂದು ತನ್ನ ಒಂದು ಫ್ಲೋರ್ ಅನ್ನೇ ಕಾರ್ಯಾಲಯದ ಕೆಲಸ ಮಾಡುವ ಜಾಗವನ್ನಾಗಿ ಪರಿವರ್ತಿಸಿದ್ದಾರೆ.
ಈ ಜಾಗದಲ್ಲಿ ಕಚೇರಿಯಲ್ಲಿ ಕೆಲಸ ಮಾಡಲು ಡೆಸ್ಕ್, ಪವರ್ ಪ್ಲಗ್‌ಗಳು, ಎಲ್‌ಸಿಡಿ ಟಿವಿ, ಹೈ-ಸ್ಪೀಡ್ ಅಂತರ್ಜಾಲ, ಕಂಪ್ಯೂಟರ್, ಹೆಡ್‌ಫೋನ್‌ಗಳು ಸೇರಿದಂತೆ ಬೇಕಾದ ಮಿಕ್ಕೆಲ್ಲಾ ಸೇವೆಗಳು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನೂ ಮಾಡಲಾಗಿದೆ.
ಶಿಂಜಿಕು ಪ್ರದೇಶದಲ್ಲಿ ಇರುವ ಈ ಹೊಟೇಲ್‌ನ ಹೆಸರು ಅಂಶಿನ್ ಒಯಾಡೋ ಹೊಟೇಲ್ ಎಂದು. ವಿಮಾನದ ಫರ್ಸ್ಟ್ ಕ್ಲಾಸ್ ಕ್ಯಾಬಿನ್ ಮಾದರಿಯಲ್ಲಿ ಈ ಹೊಟೇಲ್‌ನ ಕೋಣೆಗಳನ್ನು ಸಿದ್ಧಪಡಿಸಲಾಗಿದ್ದು, ಬ್ಯಾಕ್ಟೀರಿಯಾ ನಿರೋಧಕ ಕೋಟಿಂಗ್ ಮಾಡಲಾಗಿದೆ.