alex Certify ಗುಡ್ ನ್ಯೂಸ್: ನಿಮ್ಮಲ್ಲಿರುವ ಹಣ ದುಪ್ಪಟ್ಟು ಮಾಡಲು ಇಲ್ಲಿದೆ ಸುಲಭ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್ ನ್ಯೂಸ್: ನಿಮ್ಮಲ್ಲಿರುವ ಹಣ ದುಪ್ಪಟ್ಟು ಮಾಡಲು ಇಲ್ಲಿದೆ ಸುಲಭ ವಿಧಾನ

ಕೊರೊನಾದಿಂದಾಗಿ ಈ ವರ್ಷ ಅನೇಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಮುಂದಿನ ವರ್ಷ ಇಂತಹ ಸಮಸ್ಯೆ ಉಂಟಾಗಬಾರದು ಅಂದರೆ ನಾವು ಸರಿಯಾದ ಸ್ಕೀಮ್​ಗಳಲ್ಲಿ ಬಂಡವಾಳ ಹಾಕೋದು ಒಳ್ಳೆಯದು. ಈಗಾಗಲೇ ಸರ್ಕಾರಿ ಸಂಸ್ಥೆಗಳೇ ಗ್ರಾಹಕರಿಗೆ ಅನೇಕ ಸ್ಕೀಮ್​ಗಳನ್ನ ಪರಿಚಯ ಮಾಡಿವೆ. ಇದೆಲ್ಲದರಲ್ಲಿ ಸರ್ಕಾರ ಪರಿಚಯಿಸಿರುವ ಅತ್ಯಂತ ಹಳೆಯ ಅಂಚೆ ಕಚೇರಿಯ ಉಳಿತಾಯ ಸ್ಕೀಮ್​ಗಳೂ ಸಹ ಒಂದು.
ಅಂಚೆ ಕಚೇರಿಯ ಉಳಿತಾಯ ಸ್ಕೀಮ್​ಗಳು ಹಳೆಯ ಪ್ಲಾನ್​ಗಳಾಗಿದ್ದರೂ ಸಹ ಈಗಲೂ ಪ್ರಚಲಿತದಲ್ಲಿವೆ. ಇಲ್ಲಿ ನೀವು ಯಾವುದೇ ರಿಸ್ಕ್​ ಇಲ್ಲದೇ ನಿಮ್ಮ ಉಳಿತಾಯದ ಹಣವನ್ನ ಕೂಡಿಡಬಹುದಾಗಿದೆ. ಇದರಲ್ಲಿ ಕಿಸಾನ್​ ವಿಕಾಸ್​ ಪತ್ರ ಕೂಡ ಒಂದಾಗಿದ್ದು ಇದರಲ್ಲಿ ನೀವು ನಿಮ್ಮ ಉಳಿತಾಯದ ಹಣವನ್ನ ದುಪ್ಪಟ್ಟು ಮಾಡಿಕೊಳ್ಳಬಹುದಾಗಿದೆ.
ಏಪ್ರಿಲ್​ 1ರಿಂದ ಹೂಡಿಕೆದಾರರಿಗೆ ವಾರ್ಷಿಕವಾಗಿ ಶೇಕಡಾ 6.9ರಷ್ಟು ಬಡ್ಡಿದರವನ್ನ ನೀಡಲಾಗುತ್ತಿದೆ. ಕಿಸಾನ್​ ವಿಕಾಸ್​ ಪತ್ರದಲ್ಲಿ ನೀವು ಹೂಡಿಕೆ ಮಾಡುವ ಮೊತ್ತವು 124 ತಿಂಗಳಲ್ಲಿ ಅಂದರೆ 10 ವರ್ಷ ಹಾಗೂ 4 ತಿಂಗಳಲ್ಲಿ ದುಪ್ಪಟ್ಟಾಗಲಿದೆ. ಕಿಸಾನ್​ ವಿಕಾಸ್​ ಪತ್ರದಲ್ಲಿ ನೀವು ಕನಿಷ್ಟ 1 ಸಾವಿರ ರೂಪಾಯಿಯಿಂದ 100 ಗುಣಾಕಾರದಲ್ಲಿ ಗರಿಷ್ಟ ಹಣ ಎಷ್ಟು ಬೇಕಿದ್ದರೂ ಕೂಡಿಡಬಹುದಾಗಿದೆ .
ಕಿಸಾನ್​ ವಿಕಾಸ್​ ಪತ್ರ ಪ್ರಮಾಣ ಪತ್ರವನ್ನ ಈ ಕೆಳಗಿನವವರು ಖರೀದಿಸಬಹುದು.
1. ವಯಸ್ಕ
2.ಜಂಟಿ ಎ ಖಾತೆ (ಗರಿಷ್ಠ 3 ವಯಸ್ಕರು)
3.ಜಂಟಿ ಬಿ ಖಾತೆ (ಗರಿಷ್ಠ 3 ವಯಸ್ಕರು)
4. 10 ವರ್ಷಕ್ಕಿಂತ ಮೇಲ್ಪಟ್ಟ ಚಿಕ್ಕವರು
5. ಅಪ್ರಾಪ್ತನ ಪರವಾಗಿ ವಯಸ್ಕ.

ಕಿಸಾನ್​ ವಿಕಾಸ್​ ಪತ್ರವನ್ನ ಪಾಸ್​ಬುಕ್​ ರೂಪದಲ್ಲಿ ನೀಡಲಾಗುತ್ತೆ. ಇದನ್ನ ಯಾವುದೇ ವಿಭಾಗೀಯ ಅಂಚೆ ಕಚೇರಿಯಿಂದ ಖರೀದಿ ಮಾಡಬಹುದಾಗಿದೆ. ನಾಮ ನಿರ್ದೇಶನ ಸೌಲಭ್ಯವೂ ಲಭ್ಯವಿದೆ. ಕೆವಿಪಿ ಪ್ರಮಾಣ ಪತ್ರವನ್ನ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಬಹುದಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...