ಬ್ಯಾಂಕಿಂಗ್ ಕ್ಷೇತ್ರದ ದಿಗ್ಗಜ ಎಚ್ಡಿಎಫ್ಸಿ ಕ್ರೆಡಿಟ್ ಕಾರ್ಡ್ಗಳ ವಿತರಣೆಗೆ ಬ್ರೇಕ್ ಹಾಕಿರುವ ಕಾರಣ ಅದರ ಪ್ರಯೋಜನವನ್ನು ಪಡೆದುಕೊಂಡಿರುವ ಐಸಿಐಸಿಐ ಬ್ಯಾಂಕ್ ಮಾರ್ಚ್ 2021ರಲ್ಲಿ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಅತ್ಯಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ಗಳನ್ನು ವಿತರಿಸಿದ ದಾಖಲೆ ಬರೆದಿದೆ.
ಜನವರಿ-ಮಾರ್ಚ್ 2021ರ ನಡುವಿನ ತ್ರೈಮಾಸಿಕದಲ್ಲಿ ಐಸಿಐಸಿಐ ವಿತರಿಸಿದ ಕ್ರೆಡಿಟ್ ಕಾರ್ಡ್ಗಳ ಸಂಖ್ಯೆಯಲ್ಲಿ 6,72,911ರಷ್ಟು ಹೆಚ್ಚಳವಾಗಿದೆ ಎಂದು ರಿಸರ್ವ್ ಬ್ಯಾಂಕ್ನ ಇತ್ತೀಚಿನ ದತ್ತಾಂಶದಿಂದ ತಿಳಿದುಬಂದಿದೆ.
ದುಬೈಗೆ ತೆರಳಲು ಬರೋಬ್ಬರಿ 55 ಲಕ್ಷ ರೂ. ತೆತ್ತ ಉದ್ಯಮಿ
ತನ್ನ ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಳ್ಳುವವರೆಗೂ ಎಚ್ಡಿಎಫ್ಸಿ ಬ್ಯಾಂಕ್ ಯಾವುದೇ ಕ್ರೆಡಿಟ್ ಕಾರ್ಡ್ ವಿತರಿಸುವಂತಿಲ್ಲ ಎಂದು ಆರ್ಬಿಐ ನಿಷೇಧ ಹೇರಿತ್ತು. ಈ ತಾಂತ್ರಿಕ ದೋಷಗಳ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಅಂತರ್ಜಾಲ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆಗಳಲ್ಲಿ ಸಾಕಷ್ಟು ವ್ಯತ್ಯಯಗಳು ಕಂಡುಬಂದಿದ್ದವು.
ಇದೇ ವೇಳೆ, ಕ್ರೆಡಿಟ್ ಕಾರ್ಡ್ ಕ್ಷೇತ್ರಕ್ಕೆ ಹೊಸದಾಗಿ ಕಾಲಿಟ್ಟಿರುವ ಐಡಿಎಫ್ಸಿ ಫರ್ಸ್ಟ್ ಬ್ಯಾಂಕ್ 2020-21ರ ವಿತ್ತೀಯ ವರ್ಷದ ಕಡೆಯ ತ್ರೈಮಾಸಿಕದಲ್ಲಿ 1,75,753 ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ವಿತರಿಸಿದೆ.