alex Certify ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಇದೇ ಮೊದಲ ಬಾರಿಗೆ ಅಗಾಧ ಲೀಥಿಯಂ ಖನಿಜ ನಿಕ್ಷೇಪ ಪತ್ತೆ; ಎಲೆಕ್ಟ್ರಿಕ್ ವಾಹನ ಬೆಲೆ ಭಾರಿ ಇಳಿಕೆ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಇದೇ ಮೊದಲ ಬಾರಿಗೆ ಅಗಾಧ ಲೀಥಿಯಂ ಖನಿಜ ನಿಕ್ಷೇಪ ಪತ್ತೆ; ಎಲೆಕ್ಟ್ರಿಕ್ ವಾಹನ ಬೆಲೆ ಭಾರಿ ಇಳಿಕೆ ಸಾಧ್ಯತೆ

ನವದೆಹಲಿ: ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿರುವ ನಡುವೆಯೇ ಸಿಹಿ ಸುದ್ದಿಯೊಂದು ಸಿಕ್ಕಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಅಗಾಧ ಪ್ರಮಾಣದ ಲೀಥಿಯಂ ಖನಿಜ ನಿಕ್ಷೇಪ ಜಮ್ಮು ಮತ್ತು ಕಾಶ್ಮೀರದಲ್ಲಿ ಪತ್ತೆಯಾಗಿದೆ.

ಕಾಶ್ಮೀರದ ಕಣಿವೆಯಲ್ಲಿ 59 ಲಕ್ಷ ಟನ್ ಲೀಥಿಯಂ ನಿಕ್ಷೇಪ ಪತ್ತೆಯಾಗಿದ್ದು, ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ವರದಾನವಾಗಲಿದೆ. ಬ್ಯಾಟರಿ ಎಲೆಕ್ಟ್ರಾನಿಕ್ಸ್ ಉಪಕರಣಗಳ ಉತ್ಪಾದನೆ ಅಗ್ಗವಾಗಲಿದ್ದು, ಆತ್ಮ ನಿರ್ಭರ ಭಾರತಕ್ಕೆ ಅನುಕೂಲವಾಗುತ್ತದೆ.

ಬ್ಯಾಟರಿ ಬಳಕೆಯಲ್ಲಿ ಪ್ರಧಾನ ಖನಿಜವಾಗಿರುವ ಲೀಥಿಯಂ ಅನ್ನು ಎಲೆಕ್ಟ್ರಿಕ್ ವಾಹನಗಳು, ಮೊಬೈಲ್ ಫೋನ್, ಲ್ಯಾಪ್ಟಾಪ್, ಡಿಜಿಟಲ್ ಕ್ಯಾಮೆರಾ ಮೊದಲಾದ ಎಲ್ಲಾ ರೀಚಾರ್ಜಬಲ್ ವಿದ್ಯುತ್ ಸಾಧನಗಳ ಬ್ಯಾಟರಿಗಳಲ್ಲಿ ಬಳಸಲಾಗುತ್ತದೆ. ಹೃದಯಕ್ಕೆ ಅಳವಡಿಸುವ ಫೇಸ್ ಮೇಕರ್, ಗೊಂಬೆ, ಗಡಿಯಾರಗಳಲ್ಲಿ ಬಳಸುವ ರೀಚಾರ್ಜ್ ಮಾಡಲಾಗದ ಬ್ಯಾಟರಿಗಳ ತಯಾರಿಕೆಗಳಿಗೂ ಲೀಥಿಯಂ ಬಳಕೆ ಮಾಡಲಾಗುವುದು. ಸೆರಾಮಿಕ್, ಗಾಜು, ಗ್ರೀಸ್, ಔಷಧ ಉತ್ಪಾದನೆ, ಎಸಿ, ಅಲ್ಯೂಮಿನಿಯಂ ಉತ್ಪಾದನೆಗಳಲ್ಲಿಯೂ ಲೀಥಿಯಂ ಬಳಕೆ ಮಾಡಲಾಗುತ್ತದೆ,.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಭೂಗರ್ಭ ಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ ನಡೆಸಿದ ಶೋಧನಾ ಕಾರ್ಯಾಚರಣೆಯಲ್ಲಿ ನಿಕ್ಷೇಪ ಇರುವುದು ಕಂಡುಬಂದಿದೆ. ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್ ಹೈಮಾನ ಎಂಬಲ್ಲಿ 59 ಲಕ್ಷ ಟನ್ ಗಳಷ್ಟು ಲೀಥಿಯಂ ನಿಕ್ಷೇಪ ಕಂಡುಬಂದಿದೆ ಎಂದು ಗಣಿ ಇಲಾಖೆ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ಹೇಳಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ಅತಿಹೆಚ್ಚಿನ ವೆಚ್ಚ ಬ್ಯಾಟರಿಯದ್ದಾಗಿದ್ದು, ಲೀಥಿಯಂ ಮೇಲೆ ವಿದೇಶಿಗಳನ್ನು ಅವಲಂಬಿಸಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ದೇಶಿಯವಾಗಿಯೇ ಲೀಥಿಯಂ ಲಭ್ಯವಾಗುವುದರಿಂದ ಬ್ಯಾಟರಿ ತಯಾರಿಕೆ ವೆಚ್ಚ ಕಡಿಮೆಯಾಗಲಿದ್ದು, ಎಲೆಕ್ಟ್ರಿಕ್ ವಾಹನಗಳ ಬೆಲೆ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...