ವಾಟ್ಸಾಪ್ನ ಹೊಸ ಷರತ್ತು ಹಾಗೂ ನಿಯಮದ ಬಳಿಕ ಅನೇಕರು ಬೇರೆ ಮೆಸೇಜಿಂಗ್ ಅಪ್ಲಿಕೇಶನ್ಗಳತ್ತ ಮುಖ ಮಾಡಿದ್ದಾರೆ. ಈಗಾಗಲೇ ಟೆಲಿಗ್ರಾಂ ಹಾಗೂ ಸಿಗ್ನಲ್ ಅಪ್ಲಿಕೇಶನ್ಗಳು ದಿನದಿಂದ ದಿನಕ್ಕೆ ಮಿಲಿಯನ್ಗಟ್ಟಲೇ ಗ್ರಾಹಕರನ್ನ ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ.
ಎನ್ಕ್ರಿಪ್ಟ್ ಮಾಡಲಾದ ಮೆಸೆಜಿಂಗ್ ಆಯ್ಕೆಯನ್ನ ಹೊಂದಿರುವ ಟೆಲಿಗ್ರಾಂ ಕಳೆದ 72 ಗಂಟೆಗಳಲ್ಲಿ 25 ಮಿಲಿಯನ್ ಹೊಸ ಬಳಕೆದಾರರನ್ನ ನೋಂದಾಯಿಸಿದೆ ಎಂದು ರಷ್ಯಾ ಮೂಲದ ಸಂಸ್ಥಾಪಕ ಪಾವೆಲ್ ಡುರೆವ್ ಮಂಗಳವಾರ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ 36 ವರ್ಷದ ಡುರೆವ್, ಟೆಲಿಗ್ರಾಂ ಈ ವರ್ಷದ ಮೊದಲ ವಾರದಲ್ಲಿ 500 ಮಿಲಿಯನ್ಗಿಂತಲೂ ಹೆಚ್ಚು ಬಳಕೆದಾರರನ್ನ ಹೊಂದಿತ್ತು. ಆದರೆ ಕಳೆದ 72 ಗಂಟೆಗಳಲ್ಲಿ 25 ಮಿಲಿಯನ್ ಹೊಸ ಬಳಕೆದಾರರು ಟೆಲಿಗ್ರಾಂಗೆ ಸೇರಿಕೊಂಡಿದ್ದಾರೆ ಎಂದು ಹೇಳಿದ್ರು.
ಎರಡು ಶತಕೋಟಿ ಬಳಕೆದಾರರನ್ನ ಹೊಂದಿದ್ದ ವಾಟ್ಸಾಪ್ ತನ್ನ ಷರತ್ತು ಹಾಗೂ ನಿಯಮಗಳಲ್ಲಿ ವಿವಾದಾತ್ಮಕ ಬದಲಾವಣೆಗಳನ್ನ ಮಾಡಿದ ಬಳಿಕ ಉಳಿದ ಮೆಸೇಜಿಂಗ್ ಅಪ್ಲಿಕೇಶನ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ವಾಟ್ಸಾಪ್ ತನ್ನ ಹೊಸ ಷರತ್ತಿನ ಪ್ರಕಾರ ಫೇಸ್ಬುಕ್ಗೆ ಬಳಕೆದಾರರ ಮಾಹಿತಿಯನ್ನ ನೀಡೋದಾಗಿ ಹೇಳಿತ್ತು. ಆದರೆ ಈ ಬಗ್ಗೆ ಗೊಂದಲಗಳು ಹೆಚ್ಚಾದ ಬಳಿಕ ವಾಟ್ಸಾಪ್ ಟ್ವಿಟರ್ ಖಾತೆಯಲ್ಲಿ ಷರತ್ತು ಹಾಗೂ ನಿಯಮದ ಬಗ್ಗೆ ಸ್ಪಷ್ಟನೆಯನ್ನೂ ನೀಡಿದೆ.