ದೇಶದ ಮೊದಲ ಕಾರ್ಪೋರೇಟ್ ರೈಲು ’ತೇಜಸ್ ಎಕ್ಸ್‌ಪ್ರೆಸ್’ಗಳನ್ನು ದೇಶದ ಅತ್ಯಂತ ಬ್ಯುಸಿ ಮಾರ್ಗಗಳಾದ ಲಖನೌ-ದೆಹಲಿ ಹಾಗೂ ಮುಂಬಯಿ-ಅಹಮದಾಬಾದ್ ನಡುವೆ ಮತ್ತೆ ಓಡಿಸಲು ಐಆರ್‌ಸಿಟಿಸಿ ಸನ್ನದ್ಧವಾಗಿದೆ.
ಫೆಬ್ರವರಿ 14, 2021ರಿಂದ ಈ ರೈಲುಗಳ ಸಂಚಾರ ಮರು ಆರಂಭವಾಗಲಿದೆ. ತೇಜಸ್ ಎಕ್ಸ್‌ಪ್ರೆಸ್ ಸೇವೆಯನ್ನು ಮತ್ತೆ ಆರಂಭಿಸಲು ರೈಲ್ವೇ ಸಚಿವಾಲಯ ಹಸಿರು ನಿಶಾನೆ ತೋರಿದೆ.
PNB ಗ್ರಾಹಕರಿಗೆ ಸಿಹಿ ಸುದ್ದಿ: ಬ್ಯಾಂಕ್ ನೀಡ್ತಿದೆ ಪ್ರತಿ ತಿಂಗಳು 30 ಸಾವಿರ ಗಳಿಸುವ ಅವಕಾಶ
ಈ ರೈಲುಗಳ ಎಲ್ಲಾ ಸೀಟುಗಳಿಗೆ ಬುಕಿಂಗ್ ಮಾಡಲು ವಾರದಲ್ಲಿ ನಾಲ್ಕು ದಿನಗಳ ಮಟ್ಟಿಗೆ ಅವಕಾಶ ಕೊಡಲಾಗುವುದು. ಐಆರ್‌ಸಿಟಿಸಿಯ ಜಾಲತಾಣ www.irctc.co.in ಹಾಗೂ ಮೊಬೈಲ್ ಅಪ್ಲಿಕೇಶನ್ ಮೂಲಕ ಬುಕಿಂಗ್ ಮಾಡಿಕೊಳ್ಳಬೇಕಾಗಿದೆ.
ಪ್ರತಿಯೊಂದು ತೇಜಸ್ ರೈಲಿಗೂ 700+ ಪ್ರಯಾಣಿಕರ ಸಾಮರ್ಥ್ಯವಿದ್ದು, 30 ದಿನಗಳವರೆಗೂ ಮುಂಚಿತವಾಗಿ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ. ಪ್ರತಿಯೊಬ್ಬ ಪ್ರಯಾಣಿಕನಿಗೂ ಕೋವಿಡ್-19 ಕಿಟ್ ಕೊಡಲಾಗುವುದು. ಈ ಕಿಟ್‌ನಲ್ಲಿ ಸ್ಯಾನಿಟೈಸರ್‌ಗಳು, ಒಂದು ಜೊತೆ ಗ್ಲೌಸ್‌ಗಳು ಹಾಗೂ ಒಂದು ಮಾಸ್ಕ್ ಇರಲಿವೆ. ಬೋಗಿಗಳನ್ನು ಪ್ರವೇಶಿಸುವ ಮುನ್ನ ಪ್ರತಿಯೊಬ್ಬ ಪ್ರಯಾಣಿಕನಿಗೂ ಥರ್ಮಲ್ ಸ್ಕ್ರೀನಿಂಗ್ ಹಾಗೂ ಕೈಗಳಿಗೆ ಸ್ಯಾನಿಟೈಸರ್ ಹಾಕುವ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಮಾಡಲಾಗುವುದು.