ನವದೆಹಲಿ: ದೇಶದ ಪ್ರತಿಷ್ಠಿತ ಐಟಿ ಕಂಪನಿಗಳಲ್ಲಿ ಒಂದಾದ ಟಾಟಾ ಟೆಕ್ನಾಲಜೀಸ್ ಹೆಚ್ಚುವರಿಯಾಗಿ ಒಂದು ಸಾವಿರ ಮಂದಿ ನೇಮಕ ಮಾಡಿಕೊಳ್ಳಲಿದೆ. ಇದರೊಂದಿಗೆ 2022 -23ನೇ ಹಣಕಾಸು ವರ್ಷದಲ್ಲಿ 4000 ನೇಮಕಾತಿ ನಡೆಯಲಿದೆ.
ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ದೇಶದ ಪ್ರಮುಖ ಕಡೆಗಳಲ್ಲಿ ಮತ್ತು ಜಾಗತಿಕವಾಗಿ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುವುದು. ಕಂಪನಿ ವಹಿವಾಟು ಉತ್ತಮ ಬೆಳವಣಿಗೆ ಕಾಣುತ್ತಿರುವುದರಿಂದ ಗ್ರಾಹಕರ ಅಗತ್ಯ ಪೂರೈಸಲು 2022 -23 ನೇ ಸಾಲಿನಲ್ಲಿ 3000 ಮಂದಿ ನೇಮಕ ಮಾಡಿಕೊಳ್ಳುವುದಾಗಿ ಟಾಟಾ ಟೆಕ್ನಾಲಜೀಸ್ ಹೇಳಿದ್ದು, ಇದಕ್ಕೆ ಹೆಚ್ಚುವರಿಯಾಗಿ 1000 ಸೇರಿ ಒಟ್ಟು 4000 ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದ ಮೂರನೇ ತ್ತೈಮಾಸಿಕದಲ್ಲಿ 1500 ಮಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.