alex Certify ಬೈಕ್‌ ಖರೀದಿದಾರರಿಗೆ ಬಿಗ್ ಶಾಕ್: ಸುಜುಕಿಯ ಮತ್ತೆರಡು ಮಾಡೆಲ್‌ ಗಳ ಬೆಲೆ ಏರಿಕೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್‌ ಖರೀದಿದಾರರಿಗೆ ಬಿಗ್ ಶಾಕ್: ಸುಜುಕಿಯ ಮತ್ತೆರಡು ಮಾಡೆಲ್‌ ಗಳ ಬೆಲೆ ಏರಿಕೆ..!

ಸುಜುಕಿ ಮೋಟಾರ್​ಸೈಕಲ್​ ಇಂಡಿಯಾ ತನ್ನ ಪ್ರಖ್ಯಾತ ಬೈಕ್​ ಶ್ರೇಣಿಯಾದ ಜಿಕ್ಸರ್​ 250 ಹಾಗೂ ಜಿಕ್ಸರ್​ ಎಸ್​ಎಫ್​ 250ಯ ದರವನ್ನ ಏರಿಕೆ ಮಾಡಿದೆ. ಪ್ರತಿ ಮಾಡೆಲ್​ನ ಬೆಲೆ 2,073 ರೂಪಾಯಿ ಏರಿಕೆ ಕಂಡಿದೆ. ದರ ಏರಿಕೆಯ ಬಳಿಕ ಸುಜುಕಿ ಜಿಕ್ಸರ್​ 250ಯ ಪ್ರಸ್ತುತ ಬೆಲೆ 1,67,700 ರೂಪಾಯಿಯಾದ್ರೆ ಜಿಕ್ಸರ್​ ಎಸ್​ಎಫ್​ 250ಯ ದರ 1,79,200 ರೂಪಾಯಿಯಾಗಿದೆ. ದರ ಏರಿಕೆ ಒಂದನ್ನ ಹೊರತುಪಡಿಸಿದ್ರೆ ಬೈಕ್​ನ ಮಾಡೆಲ್​ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.‌

ಬಿಎಸ್​6 ಜಿಕ್ಸರ್​ 250 ಶ್ರೇಣಿಯಲ್ಲಿ ಅದೇ 249 ಸಿಸಿ ಇಂಜಿನ್​ ಇರಲಿದೆ. ಸಿಂಗಲ್​ ಓವರ್​ಹೆಡ್​ ಕ್ಯಾಮ್, ಸಿಂಗಲ್​ ಸಿಲಿಂಡರ್​, ಆಯಿಲ್​ ಕೂಲ್ಡ್​ ಎಂಜಿನ್​​ ಇರಲಿದೆ. ಎಂಜಿನ್​ನ್ನು ಸಿಕ್ಸ್​ ಸ್ಪೀಡ್​ ಗಿಯರ್ ಬಾಕ್ಸ್ ಜೊತೆ ಹೊಂದಿಸಲಾಗಿದೆ.

ಕಳೆದ ತಿಂಗಳು ಮಾರುತಿ ಸುಜುಕಿ ಎಕ್ಸೆಸ್​ 125 ಸ್ಕೂಟರ್​ ಹಾಗೂ ಇಂಟ್ರೂಡರ್​ 155 ಕ್ರೂಸರ್​ ಮೋಟಾರ್​ ಸೈಕಲ್​ನ ದರದಲ್ಲಿ ಕೇವಲ 186 ರೂಪಾಯಿ ಏರಿಕೆ ಮಾಡಿತ್ತು. ಈ ಮಾಡೆಲ್​ ಕೂಡ ದರ ಏರಿಕೆ ಒಂದನ್ನ ಹೊರತುಪಡಿಸಿದ್ರೆ ಮತ್ಯಾವುದೇ ಬದಲಾವಣೆ ಕಂಡಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...