alex Certify ʼಡೂಡಲ್​ ಫಾರ್​ ಗೂಗಲ್ʼ​ ಗೆದ್ದ ಯುವಕನಿಗೆ ಸುಂದರ್ ಪಿಚ್ಚೈ ಸಪ್ರೈಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಡೂಡಲ್​ ಫಾರ್​ ಗೂಗಲ್ʼ​ ಗೆದ್ದ ಯುವಕನಿಗೆ ಸುಂದರ್ ಪಿಚ್ಚೈ ಸಪ್ರೈಸ್…!

ಗೂಗಲ್​​​ ಸಿಇಓ ಸುಂದರ್​ ಪಿಚ್ಚೈ ಅಮೆರಿಕದ ವಿದ್ಯಾರ್ಥಿಯೊಬ್ಬರಿಗೆ ವಿಡಿಯೋ ಕಾಲ್​ ಮಾಡಿ ಗುಡ್​ ನ್ಯೂಸ್​ ಒಂದನ್ನ ಶೇರ್​ ಮಾಡಿದ್ದಾರೆ.‌

ಕೆಂಟುಕಿಯ 11ನೇ ತರಗತಿ ವಿದ್ಯಾರ್ಥಿ ಮಿಲೋ ಗೋಲ್ಡಿಂಗ್​​ ಈ ವರ್ಷದ ಡೂಡಲ್​ ಫಾರ್​ ಗೂಗಲ್​ ಸ್ಪರ್ಧೆಯ ವಿಜೇತರಾಗಿದ್ದಾರೆ. ಈ ವರ್ಷದ ಥೀಮ್​ ಆದ ನಾನು ಶಕ್ತಿಶಾಲಿಯಾಗಿದ್ದೇನೆ ಏಕೆಂದರೆ…..ಎಂಬುದರ ಅಡಿಯಲ್ಲಿ ಅವರು ಚಿತ್ರವನ್ನ ಬಿಡಿಸಿದ್ದರು. ಈ ಚಿತ್ರವನ್ನ ಡೂಡಲ್​​ನಲ್ಲಿ ಪ್ರಕಟಿಸಲಾಗಿದೆ.

ಮಿಲೋ ಗೋಲ್ಡಿಂಗ್​​​ ಈ ಸ್ಪರ್ಧೆಯ ವಿಜೇತರಾಗಿದ್ದಾರೆ ಅನ್ನೋದನ್ನ ತಿಳಿಸಲು ಸ್ವತಃ ಸುಂದರ್​ ಪಿಚ್ಚೈ ಕರೆ ಮಾಡಿದ್ದಾರೆ. ಕರೆಯಲ್ಲಿ ಗೋಲ್ಡಿಂಗ್​​ ಬರೋಬ್ಬರಿ 22,00,951 ರೂಪಾಯಿ ವಿದ್ಯಾರ್ಥಿವೇತನವನ್ನ ಗೆದ್ದಿದ್ದಾರೆ.

ಸುಂದರ್​ ಪಿಚ್ಚೈರಿಂದ ಶುಭಾಶಯ ಸ್ವೀಕರಿಸಿದ ಬಳಿಕ ಮಾತನಾಡಿದ ಗೋಲ್ಡಿಂಗ್​​ ತಾವು ಮೆಡಿಕಲ್​​ ವಿಭಾಗದಲ್ಲಿ ಓದುವ ಅಭಿಲಾಷೆಯನ್ನ ವ್ಯಕ್ತಪಡಿಸಿದ್ದಾರೆ.

ಗೋಲ್ಡಿಂಗ್​ 13 ವರ್ಷ ಪ್ರಾಯದವರಾಗಿದ್ದಾಗ ಅವರ ತಂದೆ ಹೃದಯಾಘಾತದಿಂದ ನಿಧನರಾಗಿದ್ದರು. ಹೀಗಾಗಿ ಗೋಲ್ಡಿಂಗ್​​​ ಇದೀಗ ಚಾರಿಟಿ ನಡೆಸುತ್ತಿದ್ದು ಈ ಮೂಲಕ ತನ್ನಂತೆ ಕುಟುಂಬಸ್ಥರನ್ನ ಕಳೆದುಕೊಂಡವರಿಗೆ ಸಹಾಯ ಮಾಡುತ್ತಿದ್ದಾರೆ.

ಈ ವಿಚಾರವನ್ನ ಟ್ವಿಟರ್​ನಲ್ಲಿ ಸ್ವತಃ ಸುಂದರ್​ ಪಿಚ್ಚೈ ಶೇರ್​ ಮಾಡಿದ್ದಾರೆ. ಟ್ವಿಟರ್​ನಲ್ಲಿ ವಿಡಿಯೋಕಾಲ್​ ದೃಶ್ಯಾವಳಿಗಳನ್ನ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...