ಗೂಗಲ್ ಸಿಇಓ ಸುಂದರ್ ಪಿಚ್ಚೈ ಅಮೆರಿಕದ ವಿದ್ಯಾರ್ಥಿಯೊಬ್ಬರಿಗೆ ವಿಡಿಯೋ ಕಾಲ್ ಮಾಡಿ ಗುಡ್ ನ್ಯೂಸ್ ಒಂದನ್ನ ಶೇರ್ ಮಾಡಿದ್ದಾರೆ.
ಕೆಂಟುಕಿಯ 11ನೇ ತರಗತಿ ವಿದ್ಯಾರ್ಥಿ ಮಿಲೋ ಗೋಲ್ಡಿಂಗ್ ಈ ವರ್ಷದ ಡೂಡಲ್ ಫಾರ್ ಗೂಗಲ್ ಸ್ಪರ್ಧೆಯ ವಿಜೇತರಾಗಿದ್ದಾರೆ. ಈ ವರ್ಷದ ಥೀಮ್ ಆದ ನಾನು ಶಕ್ತಿಶಾಲಿಯಾಗಿದ್ದೇನೆ ಏಕೆಂದರೆ…..ಎಂಬುದರ ಅಡಿಯಲ್ಲಿ ಅವರು ಚಿತ್ರವನ್ನ ಬಿಡಿಸಿದ್ದರು. ಈ ಚಿತ್ರವನ್ನ ಡೂಡಲ್ನಲ್ಲಿ ಪ್ರಕಟಿಸಲಾಗಿದೆ.
ಮಿಲೋ ಗೋಲ್ಡಿಂಗ್ ಈ ಸ್ಪರ್ಧೆಯ ವಿಜೇತರಾಗಿದ್ದಾರೆ ಅನ್ನೋದನ್ನ ತಿಳಿಸಲು ಸ್ವತಃ ಸುಂದರ್ ಪಿಚ್ಚೈ ಕರೆ ಮಾಡಿದ್ದಾರೆ. ಕರೆಯಲ್ಲಿ ಗೋಲ್ಡಿಂಗ್ ಬರೋಬ್ಬರಿ 22,00,951 ರೂಪಾಯಿ ವಿದ್ಯಾರ್ಥಿವೇತನವನ್ನ ಗೆದ್ದಿದ್ದಾರೆ.
ಸುಂದರ್ ಪಿಚ್ಚೈರಿಂದ ಶುಭಾಶಯ ಸ್ವೀಕರಿಸಿದ ಬಳಿಕ ಮಾತನಾಡಿದ ಗೋಲ್ಡಿಂಗ್ ತಾವು ಮೆಡಿಕಲ್ ವಿಭಾಗದಲ್ಲಿ ಓದುವ ಅಭಿಲಾಷೆಯನ್ನ ವ್ಯಕ್ತಪಡಿಸಿದ್ದಾರೆ.
ಗೋಲ್ಡಿಂಗ್ 13 ವರ್ಷ ಪ್ರಾಯದವರಾಗಿದ್ದಾಗ ಅವರ ತಂದೆ ಹೃದಯಾಘಾತದಿಂದ ನಿಧನರಾಗಿದ್ದರು. ಹೀಗಾಗಿ ಗೋಲ್ಡಿಂಗ್ ಇದೀಗ ಚಾರಿಟಿ ನಡೆಸುತ್ತಿದ್ದು ಈ ಮೂಲಕ ತನ್ನಂತೆ ಕುಟುಂಬಸ್ಥರನ್ನ ಕಳೆದುಕೊಂಡವರಿಗೆ ಸಹಾಯ ಮಾಡುತ್ತಿದ್ದಾರೆ.
ಈ ವಿಚಾರವನ್ನ ಟ್ವಿಟರ್ನಲ್ಲಿ ಸ್ವತಃ ಸುಂದರ್ ಪಿಚ್ಚೈ ಶೇರ್ ಮಾಡಿದ್ದಾರೆ. ಟ್ವಿಟರ್ನಲ್ಲಿ ವಿಡಿಯೋಕಾಲ್ ದೃಶ್ಯಾವಳಿಗಳನ್ನ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.