ಬೆಂಗಳೂರು: 2023 -24ನೇ ಸಾಲಿನ ಕಬ್ಬು ನುರಿಸಲು ಅಕ್ಟೋಬರ್ 1ರಂದು ಚಾಲನೆ ನೀಡಲಾಗುವುದು. ದೇಶಾದ್ಯಂತ ಪ್ರತಿ ಟನ್ ಕಬ್ಬಿಗೆ 3150 ರೂಪಾಯಿ ಎಫ್‌ಆರ್‌ಪಿ ದರ ನಿಗದಿ ಮಾಡಲಾಗಿದ್ದು, ಐದು ಕೋಟಿ ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿದೆ.
ಕಬ್ಬು ನುರಿಸುವ ಹಂಗಾಮಿಗೆ ಬೆಳೆಗಾರರಿಗೆ ಅನುಕೂಲವಾಗುವಂತೆ ಪ್ರತಿ ಟನ್ ಕಬ್ಬಿಗೆ 3150 ರೂ. ಎಫ್.ಆರ್.ಪಿ. ನಿಗದಿಪಡಿಸಲಾಗಿದೆ. 2022 -23ನೇ ಸಾಲಿನ ಸಾಲಿಗಿಂತ ಈ ಬಾರಿ ಎಫ್.ಆರ್.ಪಿ. ದರ ಶೇಕಡ 3.28 ರಷ್ಟು ಹೆಚ್ಚಳವಾಗಿದೆ. ಇದರಿಂದ ಬೆಳೆಗಾರರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.