alex Certify ಬೆಳ್ಳಂಬೆಳಗ್ಗೆ ಹೂಡಿಕೆದಾರರಿಗೆ ಬಂಪರ್: ಕುಸಿತ ಕಂಡಿದ್ದ ಷೇರುಪೇಟೆ ಭರ್ಜರಿ ವಾಪಸಾತಿ, ಮತ್ತೆ 55 ಸಾವಿರ ದಾಟಿದ ಸೆನ್ಸೆಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳ್ಳಂಬೆಳಗ್ಗೆ ಹೂಡಿಕೆದಾರರಿಗೆ ಬಂಪರ್: ಕುಸಿತ ಕಂಡಿದ್ದ ಷೇರುಪೇಟೆ ಭರ್ಜರಿ ವಾಪಸಾತಿ, ಮತ್ತೆ 55 ಸಾವಿರ ದಾಟಿದ ಸೆನ್ಸೆಕ್ಸ್

ನವದೆಹಲಿ: ಸ್ಟಾಕ್ ಮಾರುಕಟ್ಟೆಯು ಶುಕ್ರವಾರದಂದು ಭರ್ಜರಿ ಪುನರಾಗಮನ ಮಾಡಿದೆ, ಕುಸಿತ ಕಂಡಿದ್ದ ಮುಂಬೈ ಷೇರುಪೇಟೆ ಭರ್ಜರಿ ಏರಿಕೆ ಕಂಡಿದೆ. ಇತಿಹಾಸದಲ್ಲಿ ಐದನೇ ಮಹಾ ಕುಸಿತದಿಂದ ಚೇತರಿಸಿಕೊಂಡ ಮಾರುಕಟ್ಟೆ ಆರಂಭವಾದ ಕೂಡಲೇ ಸೆನ್ಸೆಕ್ಸ್ 55 ಸಾವಿರದ ಗಡಿ ದಾಟಿತು.

ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 792 ಪಾಯಿಂಟ್‌ಗಳ ಏರಿಕೆ ಕಂಡು 55,322ರಲ್ಲಿ ವಹಿವಾಟು ಆರಂಭಿಸಿದೆ. ನಿಫ್ಟಿ ಕೂಡ 268 ಅಂಕಗಳ ಪ್ರಬಲ ಜಿಗಿತದೊಂದಿಗೆ 16,515.65 ರಲ್ಲಿ ವಹಿವಾಟು ಆರಂಭಿಸಿದೆ. ಹೂಡಿಕೆದಾರರು ಇಂದು ಹೆಚ್ಚಿನ ಷೇರುಗಳನ್ನು ಖರೀದಿಸಿದ್ದು, ಬೆಳಗ್ಗೆ 9.30ರ ವೇಳೆಗೆ ಸೆನ್ಸೆಕ್ಸ್ 1,152 ಅಂಕಗಳ ಏರಿಕೆಯೊಂದಿಗೆ 55,678ರಲ್ಲಿ ವಹಿವಾಟು ನಡೆಸುತ್ತಿದೆ. ಅದೇ ರೀತಿ ನಿಫ್ಟಿ ಕೂಡ 357 ಪಾಯಿಂಟ್ ಏರಿಕೆ ಕಂಡು 16,604ಕ್ಕೆ ತಲುಪಿದೆ.

ಎಲ್ಲ ಕ್ಷೇತ್ರಗಳಲ್ಲೂ ಬೆಳವಣಿಗೆ

ಹೂಡಿಕೆದಾರರ ನಿರಂತರ ಖರೀದಿಯಿಂದಾಗಿ, ವಿನಿಮಯ ಕೇಂದ್ರದ ಎಲ್ಲಾ ವಲಯಗಳು ಇಂದು ಬೆಳವಣಿಗೆ ವಿಶೇಷವಾಗಿ ಪಿಎಸ್‌ಯು ಬ್ಯಾಂಕ್, ಮೆಟಲ್, ರಿಯಲ್ ಎಸ್ಟೇಟ್ ಸೂಚ್ಯಂಕವು ಶೇಕಡ 4 ರವರೆಗೆ ಜಿಗಿದಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ ಕ್ಯಾಪ್ ಕೂಡ ಪ್ರಬಲವಾದ ಪುನರಾಗಮನವನ್ನು ಮಾಡಿದೆ ಮತ್ತು ಶೇಕಡ 3 ರಷ್ಟು ಗಳಿಸಿದೆ. ಪಿಎಸ್‌ಯು ಬ್ಯಾಂಕ್‌ನ ಷೇರುಗಳು ಎನ್‌ಎಸ್‌ಇಯಲ್ಲಿ ಶೇಕಡಾ 5 ರಷ್ಟು ಜಿಗಿತವನ್ನು ತೋರಿಸಿದೆ. ಎಸ್‌ಬಿಐ, ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಶುಭಾರಂಭ ಮಾಡಿವೆ.

ಶಕ್ತಿ ಪ್ರದರ್ಶಿಸಿದ ಏಷ್ಯನ್ ಮಾರುಕಟ್ಟೆಗಳು

ಏಷ್ಯನ್ ಮಾರುಕಟ್ಟೆಗಳು ಫೆಬ್ರವರಿ 25 ರ ಬೆಳಿಗ್ಗೆ ಬಲವಾದ ಲಾಭದೊಂದಿಗೆ ವ್ಯಾಪಾರವನ್ನು ಪ್ರಾರಂಭಿಸಿವೆ. ಸಿಂಗಾಪುರದ ಎರಡು ವಿನಿಮಯ ಕೇಂದ್ರಗಳು 2.09 ಮತ್ತು 1.14 ರಷ್ಟು ಲಾಭವನ್ನು ಕಂಡವು, ಜಪಾನ್‌ನ ನಿಕ್ಕಿ ಶೇಕಡ 1.54 ರಷ್ಟು ಜಿಗಿತದೊಂದಿಗೆ ವಹಿವಾಟು ನಡೆಸುತ್ತಿದೆ. ಇದರ ಹೊರತಾಗಿ, ತೈವಾನ್‌ನ ವಿನಿಮಯದಲ್ಲಿ 0.70 ಪ್ರತಿಶತ ಮತ್ತು ದಕ್ಷಿಣ ಕೊರಿಯಾದಲ್ಲಿ 1.13 ಪ್ರತಿಶತದಷ್ಟು ಏರಿಕೆ ಕಂಡುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...