ನೀವು ಕೃಷಿಕರಾಗಿದ್ದರೆ ಮೋದಿ ಸರ್ಕಾರದ ಈ ಯೋಜನೆ ನಿಮಗೆ ಲಾಭಕರವಾಗಲಿದೆ. ಕೃಷಿ ಯಂತ್ರೋಪಕರಣ ಬ್ಯಾಂಕ್ ಶುರು ಮಾಡಿ ರೈತರಿಗೆ ನೀವು ಸಹಾಯ ಮಾಡಬಹುದು. ಈ ಮೂಲಕ ಹಣ ಗಳಿಕೆ ಮಾಡಬಹುದು. ಕೃಷಿ ಯಂತ್ರೋಪಕರಣವನ್ನು ರೈತರಿಗೆ ಬಾಡಿಗೆ ನೀಡಿ ನೀವು ಹಣ ಸಂಪಾದನೆ ಮಾಡಬಹುದು.
ಕೃಷಿ ಯಂತ್ರೋಪಕರಣ ಬ್ಯಾಂಕ್ ಶುರು ಮಾಡಲು ಸರ್ಕಾರ ನಿಮಗೆ ಸಹಾಯ ಮಾಡಲಿದೆ. ಸರ್ಕಾರ 24 ಲಕ್ಷ ರೂಪಾಯಿ ಸಾಲ ನೀಡಲಿದೆ. ಯಂತ್ರಗಳ ಬಳಕೆಯಿಂದ ಕೃಷಿ ಕೆಲಸ ಸುಲಭವಾಗುತ್ತದೆ. ಜೊತೆಗೆ ಉತ್ಪಾದನೆ ಹೆಚ್ಚಾಗುತ್ತದೆ. ಈ ಕಾರಣಕ್ಕೆ ಮೋದಿ ಸರ್ಕಾರ ರಾಜ್ಯಗಳಿಗೆ ಹಣ ನೀಡ್ತಿದೆ. ಲಾಭ ಪಡೆಯಲು ನೀವು ನಿಮ್ಮ ರಾಜ್ಯದ ಕೃಷಿ ಇಲಾಖೆಯ ಎಂಜಿನಿಯರಿಂಗ್ ವಿಭಾಗವನ್ನು ಸಂಪರ್ಕಿಸಬೇಕಾಗುತ್ತದೆ.
ನೀವು ಏಕಾಂಗಿಯಾಗಿ ಕೃಷಿ ಯಂತ್ರೋಪಕರಣ ಬ್ಯಾಂಕ್ ಶುರು ಮಾಡಬಹುದು. ನಿಮ್ಮ ಕ್ಷೇತ್ರದ ರೈತರಿಗೆ ಯಾವ ಯಂತ್ರಗಳ ಅಗತ್ಯವಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಯಂತ್ರೋಪಕರಣ ಖರೀದಿ ಮಾಡಬಹುದು. ಸಹಕಾರಿ ಗುಂಪಿನ ಮೂಲಕವೂ ನೀವು ಶುರು ಮಾಡಬಹುದು. ಆದ್ರೆ ಗುಂಪಿನಲ್ಲಿ 6-8 ಮಂದಿ ಇರಬೇಕು. ಗುಂಪಿಗೆ 8 ಲಕ್ಷದವರೆಗೆ ಸಬ್ಸಿಡಿ ಸಿಗುತ್ತದೆ. ದೇಶದಲ್ಲಿ ಈಗಾಗಲೇ 20 ಸಾವಿರ ಕೃಷಿ ಯಂತ್ರೋಪಕರಣ ಬ್ಯಾಂಕ್ ಇದೆ. ಸಣ್ಣ ರೈತರ ಸಂಖ್ಯೆ ಭಾರತದಲ್ಲಿ ಹೆಚ್ಚಿದೆ. ಯಂತ್ರೋಪಕರಣ ಖರೀದಿ ಅವ್ರಿಂದ ಸಾಧ್ಯವಿಲ್ಲ. ಬ್ಯಾಂಕ್ ಶುರುವಾದ್ರೆ ಬೇಕಾದಾಗ ಬಾಡಿಗೆ ಪಡೆದು ರೈತರು ಕೆಲಸ ಮುಗಿಸಿಕೊಳ್ತಾರೆ ಎಂಬುದು ಅಧಿಕಾರಿಗಳ ಅನಿಸಿಕೆ. ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ https://agrimachinery.nic.in/Index/farmsapp ಸಂಪರ್ಕಿಸಬಹುದಾಗಿದೆ.