2014ರಲ್ಲಿ ಫೇಸ್ಬುಕ್ ಒಡೆತನ ಸಾಧಿಸಿದ ವಾಟ್ಸಾಪ್ ಸದ್ಯ ಬಹಳ ಚಾಲ್ತಿಯಲ್ಲಿರುವ ಮೆಸೆಂಜಿಂಗ್ ಅಪ್ಲಿಕೇಶನ್ ಆಗಿದೆ. ವಿಶ್ವದಲ್ಲಿ 2 ಬಿಲಿಯನ್ ಸಕ್ರಿಯ ಚಂದಾದಾರರನ್ನ ವಾಟ್ಸಾಪ್ ಹೊಂದಿದೆ. 2016ರಿಂದ ವಾಟ್ಸಾಪ್ ಡಿಫಾಲ್ಟ್ ಮೆಸೇಜ್ ಸೌಲಭ್ಯವನ್ನ ನೀಡಿದೆ.
ಈ ರೀತಿ ಮೆಸೇಜಿಂಗ್ ಅಪ್ಲಿಕೇಶನ್ ಲೋಕದಲ್ಲಿ ತನ್ನದೇ ನಾಗಾಲೋಟ ಮುಂದುವರಿಸಿರುವ ವಾಟ್ಸಾಪ್ಗೆ ಇದೀಗ ಸಿಗ್ನಲ್ ತೊಂದರೆ ಕೊಡುತ್ತಿದೆ. ಹಾಗಂತ ವಾಟ್ಸಾಪ್ಗೆ ಏನಾದ್ರೂ ನೆಟ್ವರ್ಕ್ ಸಮಸ್ಯೆಯಾಯ್ತಾ ಅಂತಾ ಭಾವಿಸಬೇಡಿ. ಅಸಲಿಗೆ ಸಿಗ್ನಲ್ ಅನ್ನೋದು ಕೂಡ ಮೆಸೇಜಿಂಗ್ ಆಪ್ ಆಗಿದ್ದು ಇದು ವಾಟ್ಸಾಪ್ನ್ನ ಹಿಂದಿಕ್ಕುವ ಪ್ರಯತ್ನದಲ್ಲಿದೆ.
ವಾಟ್ಸಾಪ್ ಉನ್ನತ ಮಟ್ಟದ ಸೇವೆಯನ್ನ ನೀಡಲಿಕ್ಕೋಸ್ಕರ ಮ್ಯಾಕ್ಸಿ ಮರ್ಲಿನ್ ಸ್ಪೈಕ್ ಅವರ ಓಪನ್ ವಿಸ್ಪರ್ ಸಿಸ್ಟಮ್ ಎನ್ಸಕ್ಪಿಪ್ಟೆಡ್ ಮೆಸೇಜಿಂಗ್ ಪ್ರೊಟೋಕಾಲ್ನೊಂದಿಗೆ ಸಂಯೋಜನೆ ಹೊಂದಿತು. ಈ ಪ್ರೊಟೋಕಾಲ್ ಅತ್ಯಂತ ಸುರಕ್ಷಿತ ಎಂಬ ಕಾರಣಕ್ಕೆ ಮೈಕ್ರೋಸಾಫ್ಟ್ ಹಾಗೂ ಗೂಗಲ್ ಕೂಡ ಬಳಸಿಕೊಂಡಿದೆ.
ಈಗ ಇದೇ ಓಪನ್ ವಿಸ್ಪರ್ ಸಿಸ್ಟಮ್ ಸಿಗ್ನಲ್ ಮೆಸೆಂಜರ್ ಎಂಎಲ್ಸಿಯಾಗಿ ಮಾರ್ಪಾಡಾಗಿದ್ದು ಸಿಗ್ನಲ್ ಫೌಂಡೇಶನ್ನ ಒಂದು ಭಾಗವಾಗಿದೆ. ಇಷ್ಟು ದಿನ ವಾಟ್ಸಾಪ್ ಸುರಕ್ಷತೆಯ ಪ್ರೊಟೋಕಾಲ್ ಆಗಿದ್ದ ಸಿಗ್ನಲ್ ಈಗ ವಾಟ್ಸಾಪ್ನ್ನೇ ಹಿಂದಿಕ್ಕಲು ಮುಂದಾಗಿದೆಯಂತೆ.
ಅಂದಹಾಗೆ ಸಿಗ್ನಲ್ ಏಕಾಏಕಿ ಪ್ರಚಲಿತಕ್ಕೆ ಬರಲು ಕಾರಣ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಮಾಡಿದ್ದ ಟ್ವೀಟ್. ಎಲಾನ್ ಮಸ್ಕ್ ಟ್ವಿಟರ್ನಲ್ಲಿ ಸಿಗ್ನಲ್ ಬಳಕೆ ಮಾಡಿ ಅಂತಾ ಹೇಳಿದ್ದರು. ಹೀಗಾಗಿ ಜನರು ಸಿಗ್ನಲ್ ಅಪ್ಲಿಕೇಶನ್ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.