alex Certify ವಿಶ್ವದ 100 ಅತ್ಯುತ್ತಮ ಬಾರ್ ಗಳ ಪಟ್ಟಿಯಲ್ಲಿ ದೆಹಲಿ ಮಹಿಳೆ ಮಾಲೀಕತ್ವದ ಸಿಡ್ಕರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ 100 ಅತ್ಯುತ್ತಮ ಬಾರ್ ಗಳ ಪಟ್ಟಿಯಲ್ಲಿ ದೆಹಲಿ ಮಹಿಳೆ ಮಾಲೀಕತ್ವದ ಸಿಡ್ಕರ್

Sidecar to Success: Meet the Woman Behind the Best Bar in India

ನವದೆಹಲಿ: ವಿಶ್ವದ ಅತ್ಯುತ್ತಮ 100 ಬಾರ್ ಗಳ ಪಟ್ಟಿ ಬಿಡುಗಡೆಯಾಗಿದೆ.‌ ಅದರಲ್ಲಿ ದೆಹಲಿಯ ಸಿಡ್ಕರ್ ಬಾರ್ ಕೂಡ ಸೇರಿದೆ. ವಿಶೇಷ ಎಂದರೆ, ಅದನ್ನು ನಡೆಸುತ್ತಿರುವುದು ಒಬ್ಬ ಮಹಿಳೆ.!!

ಹೌದು, ದೆಹಲಿಯ ಮೀನಾಕ್ಷಿ ಸಿಂಗ್ 2018 ರಲ್ಲಿ ಪ್ರಾರಂಭಿಸಿದ ಬಾರ್ ಗೆ ವಿಶ್ವ ಮಟ್ಟದಲ್ಲಿ 94 ನೇ ಸ್ಥಾನ ದೊರಕಿದೆ. ಹೋಟೆಲ್ ಮ್ಯಾನೇಜ್ ಮೆಂಟ್ ವಿದ್ಯಾರ್ಥಿನಿಯಾಗಿರುವ ಅವರು, ಪ್ರಸಿದ್ಧ ಮಿಕ್ಸಾಲಜಿಸ್ಟ್ ಯಂಡ್ಡುಪ್ ಲಾಮಾ ಅವರ ಸಹಭಾಗಿತ್ವದಲ್ಲಿ ಬಾರ್ ಪ್ರಾರಂಭಿಸಿದ್ದರು.

ದಕ್ಷಿಣ ದೆಹಲಿಯ ಈ ಬಾರ್ ಎರಡೇ ವರ್ಷದಲ್ಲಿ ದೇಶದ ಅತ್ಯುತ್ತಮ ಬಾರ್ ಎಂದು ಸ್ಥಳೀಯವಾಗಿ ಹೆಸರು ಹಾಗೂ ಪ್ರಶಸ್ತಿ ಪಡೆದಿತ್ತು. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದೆ. 2007 ರ ಮೊದಲು ಭಾರತದಲ್ಲಿ ಮಹಿಳೆಯರು ಬಾರ್ ನಲ್ಲಿ ಸರ್ವ್ ಮಾಡಲು ಅವಕಾಶ ಇರಲಿಲ್ಲ. 2010 ರ ನಂತರ ದೆಹಲಿಯಲ್ಲಿ ಮಹಿಳೆಯರಿಗೆ ಬಾರ್ ನಡೆಸುವ ಅವಕಾಶ ಸಿಕ್ಕಿತ್ತು ಎಂಬುದೂ ಇಲ್ಲಿ ಉಲ್ಲೇಖನೀಯ.‌

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...