alex Certify ಸ್ಕೂಟರ್ ಗಿಂತ ಫ್ಯಾನ್ಸಿ ನಂಬರ್ ಬೆಲೆಯೇ 100 ಪಟ್ಟು ಅಧಿಕ: 99 ಸಂಖ್ಯೆಗಾಗಿ 1.12 ಕೋಟಿ ರೂ. ಬಿಡ್ ಮಾಡಿದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಕೂಟರ್ ಗಿಂತ ಫ್ಯಾನ್ಸಿ ನಂಬರ್ ಬೆಲೆಯೇ 100 ಪಟ್ಟು ಅಧಿಕ: 99 ಸಂಖ್ಯೆಗಾಗಿ 1.12 ಕೋಟಿ ರೂ. ಬಿಡ್ ಮಾಡಿದ ಭೂಪ

ಶಿಮ್ಲಾದ ವ್ಯಕ್ತಿ HP 99 ಸ್ಕೂಟರ್‌ ನ ಫ್ಯಾನ್ಸಿ ನೋಂದಣಿ ಪ್ಲೇಟ್‌ ಗಾಗಿ 1.12 ಕೋಟಿ ರೂ. ಬಿಡ್ ಮಾಡಿದ್ದಾರೆ.

80,000 ಅಥವಾ 90,000 ರೂ. ಬೆಲೆಯ ನಿಮ್ಮ ಸ್ಕೂಟರ್‌ಗೆ ಫ್ಯಾನ್ಸಿ ನೋಂದಣಿ ಪ್ಲೇಟ್‌ಗೆ ನೀವು ಎಷ್ಟು ಪಾವತಿಸಬಹುದು? ಹಿಮಾಚಲ ಪ್ರದೇಶದ ಶಿಮ್ಲಾದ ಖರೀದಿದಾರರೊಬ್ಬರು ಸ್ಕೂಟರ್‌ಗಾಗಿ ಫ್ಯಾನ್ಸಿ ನೋಂದಣಿ ಸಂಖ್ಯೆಗೆ(HP 99-9999) 1.12 ಕೋಟಿ ರೂ.ಗಳ ಬಾಜಿ ಕಟ್ಟಿದ್ದಾರೆ. ಈ ಸುದ್ದಿ ಸಂಚಲನವನ್ನೇ ಸೃಷ್ಟಿಸಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.

ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಕೊಟ್‌ಖೈ ನೋಂದಣಿ ಮತ್ತು ಪರವಾನಗಿ ಪ್ರಾಧಿಕಾರದಿಂದ 1.12 ಕೋಟಿ ರೂ.ಗಳ ಬಿಡ್ ಸ್ವೀಕರಿಸಲಾಗಿದೆ. ಆನ್‌ಲೈನ್ ಬಿಡ್‌ಗೆ ಮೀಸಲು ಬೆಲೆಯನ್ನು 1,000ರೂ.ಗೆ ನಿಗದಿಪಡಿಸಲಾಗಿದೆ. 26 ಜನ ಸಂಖ್ಯೆಯನ್ನು ಪಡೆಯಲು ತಮ್ಮ ಬಿಡ್ ನಲ್ಲಿ ಭಾಗವಹಿಸಿದ್ದಾರೆ. ಆನ್‌ಲೈನ್ ಬಿಡ್ ಈಗಾಗಲೇ ಸ್ಥಗಿತಗೊಳಿಸಲಾಗಿದ್ದು, ಗರಿಷ್ಠ ಬಿಡ್ 1,12,15,500 ರೂ. ಆಗಿದೆ.

ಬಿಡ್ ಮಾಡಿದವರ ವಿವರಗಳನ್ನು ಇನ್ನೂ ಸಾರ್ವಜನಿಕಗೊಳಿಸಲಾಗಿಲ್ಲ, ಆದಾಗ್ಯೂ, ವ್ಯಕ್ತಿಯು ಮೊತ್ತವನ್ನು ಠೇವಣಿ ಮಾಡಲು ವಿಫಲವಾದರೆ, ಎರಡನೇ ಅತಿ ಹೆಚ್ಚು ಬಿಡ್ ಮಾಡಿದವರಿಗೆ ಫ್ಯಾನ್ಸಿ ಸಂಖ್ಯೆಯನ್ನು ಹಂಚಲಾಗುತ್ತದೆ.

ಕೆಲವೊಮ್ಮೆ ಬಿಡ್ದಾರರು ಸ್ಪರ್ಧಿಗಳನ್ನು ಹೊರಹಾಕಲು ಒತ್ತಡ ತಂತ್ರಗಳನ್ನು ಬಳಸುತ್ತಾರೆ ಎಂಬುದನ್ನು ಅಧಿಕಾರಿಗಳು ತಳ್ಳಿಹಾಕಲಿಲ್ಲ. ಇದೇ ವೇಳೆ, ಬಿಡ್ಡಿಂಗ್ ಹಣವನ್ನು ಠೇವಣಿ ಮಾಡದಿದ್ದಲ್ಲಿ ದಂಡವನ್ನು ವಿಧಿಸುವ ಸಾಧ್ಯತೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...