ನವದೆಹಲಿ: ಕೊರೊನಾ ವಿಶ್ವವನ್ನು ತಲ್ಲಣಗೊಳಿಸಿದೆ. ಆರ್ಥಿಕತೆಯನ್ನು ಬುಡಮೇಲು ಮಾಡಿದೆ. ಎಲ್ಲದರ ನಡುವೆ ಭಾರತದ ಸಂಸತ್ ಅಧಿವೇಶನವನ್ನು ಪ್ರಾರಂಭಿಸಲಾಗಿದ್ದು, ಕೋವಿಡ್ ಪರೀಕ್ಷೆ ಮಾಡಿದಾಗ ಸಾಕಷ್ಟು ಸಂಸದರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಈ ನಡುವೆ ಸರ್ಕಾರ ದೇಶದಲ್ಲಿ ಸಂಪೂರ್ಣ ಅನ್ ಲಾಕ್ ಘೋಷಿಸಿದೆ. ಜನ ಸಾಮಾಜಿಕ ಅಂತರ, ಮಾಸ್ಕ್ ಮರೆತು ಓಡಾಡಲಾರಂಭಿಸಿದ್ದಾರೆ.
ಸಾಮಾಜಿಕ ಜಾಲತಾಣಗಲ್ಲಿ ಮುಂಚೂಣಿಯಲ್ಲಿರುವ ಟ್ವಿಟರ್ ಈ ಸಂದರ್ಭದಲ್ಲಿ ಮಾಸ್ಕ್ ಧರಿಸುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದೆ. ಈಗ ಟ್ವಿಟರ್ ಪೋಸ್ಟ್ ಒಂದನ್ನು ಲೈಕ್ ಮಾಡಲು ಹಾರ್ಟ್ ಬಟನ್ ಒತ್ತಿದರೆ ಮಾಸ್ಕ್ ಧರಿಸಿದ ಇಮೋಜಿ ಬರಲಿದೆ.
ಈ ಕುರಿತು ಟ್ವೀಟರ್ ಟ್ವೀಟ್ ಮಾಡಿದ್ದು, “ಈ ವಿಷಯ ವೈರಲ್ ಆಗಬೇಕು ಎಂಬುದು ನಮ್ಮ ಇಚ್ಛೆ” ಎಂದು ಬರೆಯಲಾಗಿದೆ. ಕೆಲವೇ ಹೊತ್ತಿನಲ್ಲಿ ಟ್ವೀಟ್ ಟ್ರೆಂಡಿಂಗ್ ಆಗಿದೆ. ಟ್ವಿಟ್ಟರ್ ಸಾಮಾಜಿಕ ಕಾಳಜಿಯ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ಈ ರೀತಿ ಸಾಮಾಜಿಕ ಕಾಳಜಿಯ ಕಾರ್ಯ ಮಾಡುತ್ತಿರುವುದು ಇದೇ ಮೊದಲಲ್ಲ. ತೃತೀಯ ಲಿಂಗಿಗಳ ಬೆಂಬಲಕ್ಕಾಗಿ ಜುಲೈನಲ್ಲಿ ಕಾಮನಬಿಲ್ಲನ್ನು ಪ್ರಕಟಿಸಿತ್ತು.
https://twitter.com/Twitter/status/1308132903830925313?ref_src=twsrc%5Etfw%7Ctwcamp%5Etweetembed%7Ctwterm%5E1308132903830925313%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fseen-it-yet-twitter-reminding-us-to-wearamask-by-replacing-like-button-with-masked-face-2898281.html
https://twitter.com/EM_RESUS/status/1308234227029364736?ref_src=twsrc%5Etfw%7Ctwcamp%5Etweetembed%7Ctwterm%5E1308234227029364736%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fseen-it-yet-twitter-reminding-us-to-wearamask-by-replacing-like-button-with-masked-face-2898281.html
https://twitter.com/marcusy_/status/1308056930787758080?ref_src=twsrc%5Etfw%7Ctwcamp%5Etweetembed%7Ctwterm%5E1308056930787758080%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fseen-it-yet-twitter-reminding-us-to-wearamask-by-replacing-like-button-with-masked-face-2898281.html