alex Certify ಗುಡ್‌ ನ್ಯೂಸ್: ಶಾಪಿಂಗ್ ಪ್ರಿಯರಿಗೆ ವಿಶೇಷ ರಿಯಾಯಿತಿ ನೀಡ್ತಿದೆ SBI | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್‌ ನ್ಯೂಸ್: ಶಾಪಿಂಗ್ ಪ್ರಿಯರಿಗೆ ವಿಶೇಷ ರಿಯಾಯಿತಿ ನೀಡ್ತಿದೆ SBI

ಎಸ್ಬಿಐ ತನ್ನ ಗ್ರಾಹಕರಿಗೆ ವಿಶೇಷ ಉಡುಗೊರೆ ನೀಡಲು ಮುಂದಾಗಿದೆ. ಶಾಪಿಂಗ್ ಮಾಡುವ ಗ್ರಾಹಕರಿಗೆ ಇದ್ರಿಂದ ಲಾಭವಾಗಲಿದೆ. ಶಾಪಿಂಗ್ ವೇಳೆ ಗ್ರಾಹಕರು ಸಾವಿರಾರು ರೂಪಾಯಿ ಉಳಿಸಬಹುದಾಗಿದೆ. ಔಷಧಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಕೆಲ ಬ್ರಾಂಡ್ ಮೇಲೂ ಎಸ್ಬಿಐ ವಿಶೇಷ ಆಫರ್ ನೀಡ್ತಿದೆ. ಇದ್ರ ಲಾಭ ಪಡೆಯಲು ಗ್ರಾಹಕರು ಯೊನೊ ಅಪ್ಲಿಕೇಷನ್ ಮೂಲಕ ಪಾವತಿಸಬೇಕು. ಇದ್ರ ಜೊತೆ ಪ್ರೋಮೋ ಕೋಡ್ ಕೂಡ ಹಾಕಬೇಕು.

ಫ್ಲೈಯಿಂಗ್ ಮೆಷಿನ್ ನಲ್ಲಿ ನೀವು ಶಾಪಿಂಗ್ ಮಾಡಲು ಬಯಸಿದ್ರೆ ಯೋನೋ ಅಪ್ಲಿಕೇಷನ್ ಮೂಲಕ ಪೇಮೆಂಟ್ ಮಾಡಿ. ಕನಿಷ್ಠ 1600 ರೂಪಾಯಿ ಖರೀದಿ ಮಾಡಿದ್ರೆ ಸುಮಾರು 1000 ರೂಪಾಯಿವರೆಗೆ ನೀವು ರಿಯಾಯಿತಿ ಪಡೆಯಲಿದ್ದೀರಿ. ಫರ್ನ್‌ಸ್ಪೆಟಲ್ ರಿಟೇಲರ್ ಕಂಪನಿಯಿಂದ ಶಾಪಿಂಗ್ ಮಾಡುವ ವೇಳೆ ಯೋನೋ ಅಪ್ಲಿಕೇಷನ್ ಬಳಸಿದ್ರೆ ರಿಯಾಯಿತಿ ಸಿಗಲಿದೆ. 500 ರೂಪಾಯಿ ಶಾಪಿಂಗ್ ಮಾಡಿದ್ರೆ ಶೇಕಡಾ 15ರಷ್ಟು ರಿಯಾಯಿತಿ ಸಿಗಲಿದೆ.

ʼನಿಶ್ಚಿತ ಠೇವಣಿʼಯಲ್ಲಿ ಹೂಡಿಕೆ ಮಾಡುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಆನ್‌ಲೈನ್ ಡಾಕ್ಟರ್ ಕನ್ಸಲ್ಟೇಶನ್ ಅಪ್ಲಿಕೇಶನ್ ಡಾಕ್ಸ್ಆಪ್ ನಿಂದ ಅಪಾಯಿಂಟ್ಮೆಂಟ್ ಗೆ ಪಾವತಿಸಲು ಯೋನೋ ಅಪ್ಲಿಕೇಷನ್ ಬಳಸಿದ್ರೆ ನಿಮಗೆ 125 ರೂಪಾಯಿಗಳ ರಿಯಾಯಿತಿ ಸಿಗಲಿದೆ. ಇದಕ್ಕೆ ನೀವು ಪ್ರೋಮೋ ಕೋಡ್ RUPAY ಅನ್ನು ಬಳಸಬೇಕಾಗುತ್ತದೆ. ಹೆಲ್ತ್ ಕೇರ್ ಕಂಪನಿ ಹೆಲ್ತ್ ಕಾರ್ಟ್ನಿಂದ ಖರೀದಿ ಮಾಡಿದ ವಸ್ತುಗಳಿಗೆ ಯೋನೋ ಅಪ್ಲಿಕೇಷನ್ ಮೂಲಕ ಪಾವತಿ ಮಾಡಿದ್ರೆ ಶೇಕಡಾ 10ರಷ್ಟು ರಿಯಾಯಿತಿ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...