ಕೋವಿಡ್-19 ಚಿಕಿತ್ಸೆ ವೆಚ್ಚ ಭರಿಸಿಕೊಳ್ಳಲೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶ್ಯೂರಿಟಿರಹಿತ ಸಾಲ ನೀಡುವ ಸ್ಕೀಂ ಒಂದನ್ನು ಪರಿಚಯಿಸಿದೆ.
“ಕವಚ್ ವೈಯಕ್ತಿಕ ಸಾಲ”ವು ಸಾಲ ತೆಗೆದುಕೊಳ್ಳುವವರ ವೈಯಕ್ತಿಕ ಹಾಗೂ ಅವರ ಕುಟುಂಬಸ್ಥರ ಕೋವಿಡ್ ಚಿಕಿತ್ಸೆಯ ವೆಚ್ಚವನ್ನು ಭರಿಸಲಿದೆ ಎಂದು ಪತ್ರಿಕಾ ಪ್ರಕಟಣೆಯೊಂದರಲ್ಲಿ ಎಸ್‌ಬಿಐ ತಿಳಿಸಿದೆ.
ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 100 ರೂ. ಗಡಿ ದಾಟಿದ ಡೀಸೆಲ್ ದರ…!
ಈ ಸಾಲದ ಭಾಗವಾಗಿ ಗರಿಷ್ಠ 5 ಲಕ್ಷ ರೂ.ಗಳವರೆಗೆ, ವಾರ್ಷಿಕ 8.5% ದರದಂತೆ 60 ತಿಂಗಳಲ್ಲಿ ಮರುಪಾವತಿ ಮಾಡಬಹುದಾದ ವೈಯಕ್ತಿಕ ಸಾಲವನ್ನು ಎಸ್‌ಬಿಐ ಕೊಡಮಾಡುತ್ತಿದೆ. ಇದರೊಂದಿಗೆ ಮಾಸಿಕ ಕಂತಿನ ಪಾವತಿಗೆ ಮೂರು ತಿಂಗಳಷ್ಟು ಮೊರಾಟಾರಿಯಂ ಅನ್ನೂ ಕೊಡುತ್ತಿದೆ ಎಸ್‌ಬಿಐ.