alex Certify SBI ಗ್ರಾಹಕರೇ ಗಮನಿಸಿ ಬ್ಯಾಂಕ್‌ ನೀಡ್ತಿದೆ ಈ ಮುಖ್ಯ ಸಂದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SBI ಗ್ರಾಹಕರೇ ಗಮನಿಸಿ ಬ್ಯಾಂಕ್‌ ನೀಡ್ತಿದೆ ಈ ಮುಖ್ಯ ಸಂದೇಶ

ದೇಶದಲ್ಲಿ ಈಗ ಆನ್​​ಲೈನ್​ ವಂಚಕರದ್ದೇ ಹಾವಳಿ ಎಂಬಂತಾಗಿದೆ. ನಕಲಿ ಮೆಸೇಜ್​ಗಳು, ನಕಲಿ ಅಪ್ಲಿಕೇಶನ್​ಗಳ ಮೂಲಕ ಜನರನ್ನ ವಂಚನೆಯ ದಾಳಕ್ಕೆ ನೂಕುವ ಕೆಲಸ ಮಾಡಲಾಗುತ್ತಿದೆ. ಹೀಗಾಗಿ ಇಂತಹ ಯಾವುದೇ ಮೋಸದ ಜಾಲಕ್ಕೆ ಬಲಿಯಾಗದಿರಿ ಎಂದು ಗ್ರಾಹಕರಿಗೆ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ವಿಶೇಷ ಸಲಹೆ ನೀಡಿದೆ.

ನಕಲಿ ವಂಚನೆ ವಿರುದ್ಧ ಗ್ರಾಹಕರನ್ನ ಎಚ್ಚರಿಸುವ ಸಲುವಾಗಿ ಎಸ್​ಬಿಐ ಮುಖ್ಯ ಸಂದೇಶವೊಂದನ್ನ ರವಾನಿಸಿದೆ. ಈ ಮೆಸೇಜ್​​ನಲ್ಲಿ ಎಟಿಎಂ ಕಾರ್ಡ್​, ಒಟಿಪಿ, ಎಟಿಎಂ ಪಿನ್​ ಹಾಗೂ ಸಿವಿವಿಗಳನ್ನ ಬ್ಯಾಂಕ್​ ಹೆಸರನ್ನ ಹೇಳಿಕೊಂಡು ಕರೆ ಇಲ್ಲವೇ ಮೆಸೇಜ್​ ಮಾಡುವ ಯಾರೊಂದಿಗೂ ಶೇರ್​ ಮಾಡದಂತೆ ಎಚ್ಚರಿಕೆ ನೀಡಿದೆ.

ಗ್ರಾಹಕರಿಗೆ ಎಸ್​ಬಿಐ ನೀಡಿರುವ ಎಚ್ಚರಿಕೆಯ ಸಂದೇಶ ಹೀಗಿದೆ:

1. ಯಾರಿಗೂ ಕೂಡ ಎಂದಿಗೂ ನಿಮ್ಮ ವೈಯಕ್ತಿಕ ಮಾಹಿತಿ, ಕಾರ್ಡ್ ವಿವರ, ಸಿವಿವಿ ಹಾಗೂ ಒಟಿಪಿ ಶೇರ್​ ಮಾಡುವಂತಿಲ್ಲ.

2. ಗೊತ್ತೇ ಇರದ ಲಿಂಕ್​​ಗಳನ್ನ ಕುತೂಹಲಕ್ಕೆಂದೂ ಎಂದಿಗೂ ತೆರೆಯದಿರಿ. ಮೊದಲು ಮೆಸೇಜ್​​ನ ಸರಿಯಾಗಿ ಓದಿ ಅದು ಎಸ್​ಬಿಐನಿಂದಲೇ ಬಂದಿದೆ ಎಂದು ಖಾತ್ರಿಯಾದ ಬಳಿಕ ಮುಂದಿನ ಕ್ರಮ ಕೈಗೊಳ್ಳಿ.

3. ನೀವು ಎಟಿಎಂ ಬಳಕೆ ಮಾಡುವ ವೇಳೆ ನಿಮ್ಮ ಹಿಂದೆ ಯಾರಾದರೂ ನಿಂತಿರೋದು ಗಮನಕ್ಕೆ ಬಂದಲ್ಲಿ, ಕೀಪ್ಯಾಡ್​ನ್ನು ಕವರ್​ ಮಾಡಿಕೊಂಡು ನಿಮ್ಮ ಎಟಿಎಂ ಪಿನ್​ ನಮೂದಿಸಿ.

4. ನಿಮ್ಮ ಎಸ್​ಬಿಐ ಕಾರ್ಡ್​ ಮೇಲೆ ಎಂದಿಗೂ ಪಾಸ್​ವರ್ಡ್​ನ್ನು ಬರೆದಿಡಬೇಡಿ.

5. ನಿಮ್ಮ ಜನ್ಮದಿನಾಂಕಕ್ಕೆ ಹೋಲುವಂತಹ ಅಂಕಿಗಳನ್ನ ಎಟಿಎಂ ಪಿನ್​ ಮಾಡಿಕೊಳ್ಳಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...