alex Certify ನೀವು ಈ ಬ್ಯಾಂಕ್ ಗ್ರಾಹಕರಾಗಿದ್ದರೆ ಇರಲಿ ಎಚ್ಚರ: ನಿಮ್ಮ ಮೇಲಿದೆ ಸೈಬರ್​ ಕಳ್ಳರ ಹದ್ದಿನ ಕಣ್ಣು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವು ಈ ಬ್ಯಾಂಕ್ ಗ್ರಾಹಕರಾಗಿದ್ದರೆ ಇರಲಿ ಎಚ್ಚರ: ನಿಮ್ಮ ಮೇಲಿದೆ ಸೈಬರ್​ ಕಳ್ಳರ ಹದ್ದಿನ ಕಣ್ಣು….!

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ, ಐಸಿಐಸಿಐ, ಹೆಚ್​ಡಿಎಫ್​ಸಿ, ಆಕ್ಸಿಸ್​ ಬ್ಯಾಂಕ್​ ಹಾಗೂ ಪಂಜಾಬ್​ ನ್ಯಾಷನಲ್​ ಬ್ಯಾಂಕ್​​ಗಳ ಗ್ರಾಹಕರಾಗಿದ್ದರೆ ನಿಮಗೊಂದು ಮಹತ್ವದ ಎಚ್ಚರಿಕೆ ಸಂದೇಶ ಇದೆ.

ಈ ಐದು ಬ್ಯಾಂಕ್​​ಗಳ ಗುರಿಯಾಗಿಸಿ ದೊಡ್ಡ ಪಿಶಿಂಗ್​​ ಹಗರಣವೇ ನಡೆಯುತ್ತಿದೆ. ದೆಹಲಿ ಮೂಲದ ಥಿಂಕ್​ ಟ್ಯಾಂಕ್​​ ಸೈಬರ್​ಪೀಸ್​​ ಫೌಂಡೇಶನ್​ ಹಾಗೂ ಸೈಬರ್​ ಸೆಕ್ಯೂರಿಟಿ ಸರ್ವೀಸಸ್​​ ನಡೆಸಿದ ತನಿಖೆಯಲ್ಲಿ ಈ ಮಹತ್ವದ ವಿಚಾರ ಬಟಾಬಯಲಾಗಿದೆ. ​

ಭಾರತೀಯ ಗ್ರಾಹಕರನ್ನ ಗುರಿಯಾಗಿಸಿಕೊಂಡಿರುವ ಸೈಬರ್​ ದುಷ್ಕರ್ಮಿಗಳು ಬ್ಯಾಂಕ್​ ಗ್ರಾಹಕರಿಂದ ಅತ್ಯಮೂಲ್ಯ ಮಾಹಿತಿಯನ್ನ ಕದಿಯುತ್ತಿದ್ದಾರೆ. ತೆರಿಗೆ ಪಾವತಿ ವಿಚಾರವಾಗಿ ಗ್ರಾಹಕರನ್ನ ಸಂಪರ್ಕಿಸೋ ಈ ಖದೀಮರು ನಕಲಿ ವೆಬ್​ಪೇಜ್​ ಲಿಂಕ್​ನ್ನು ಕಳುಹಿಸುತ್ತಾರೆ. ಈ ಲಿಂಕ್​ಗೆ ಲಾಗಿನ್​ ಆಗಿ ಇ ಫಿಲ್ಲಿಂಗ್​ ಪ್ರಕ್ರಿಯೆ ಮಾಡಲು ಹೋದ ಗ್ರಾಹಕರ ಎಲ್ಲಾ ವೈಯಕ್ತಿಕ ಹಾಗೂ ಮಹತ್ವದ ಮಾಹಿತಿಯನ್ನ ಕದಿಯಲಾಗ್ತಿದೆ.

ಅಮೆರಿಕ ಹಾಗೂ ಫ್ರಾನ್ಸ್​ನ ಮೂಲದ ಲಿಂಕ್​​ ಇದಾಗಿದ್ದು ಇದರ ಮೂಲಕ ಆರೋಪಿಗಳು ಬ್ಯಾಂಕ್​ ಗ್ರಾಹಕರ ಮಹತ್ವದ ಮಾಹಿತಿಗಳನ್ನ ಕಲೆ ಹಾಕ್ತಾರೆ. ಇದರಿಂದ ಬ್ಯಾಂಕ್​ ಗ್ರಾಹಕರು ಮುಂದಿನ ದಿನಗಳಲ್ಲಿ ಭಾರೀ ದೊಡ್ಡ ಸೈಬರ್​ ಕ್ರೈಂನ ಬಲಿಪಶುಗಳಾಗುತ್ತಾರೆ.

ನೀವು ಈ ಲಿಂಕ್​ನ್ನು ತೆರೆಯುತ್ತಿದ್ದಂತೆಯೇ ಇನ್ಕಮ್​ ಟ್ಯಾಕ್ಸ್ ಇ ಫಿಲ್ಲಿಂಗ್​ ವೆಬ್​ಸೈಟ್​ನ್ನೇ ಹೋಲುವ ನಕಲಿ ಸೈಟ್​ ಕಾಣಸಿಗಲಿದೆ. ಇದರಲ್ಲಿ ಹಸಿರು ಬಣ್ಣದಲ್ಲಿ ಕಾಣುವ ಪ್ರೊಸೀಡ್​ ಟು ದ ವೆರಿಫಿಕೇಷನ್​ ಸ್ಟೆಪ್ಸ್​ ಬಟನ್​​ ಕ್ಲಿಕ್​​ ಮಾಡಿದ ಬಳಿಕ ನಿಮ್ಮ ಹೆಸರು, ಪಾನ್​ ಸಂಖ್ಯೆ, ಆಧಾರ್​ ಸಂಖ್ಯೆ, ವಿಳಾಸ, ಪಿನ್​ಕೋಡ್​​, ಹುಟ್ಟಿದ ದಿನಾಂಕ ಹೀಗೆ ಸಾಕಷ್ಟು ಮಾಹಿತಿಯನ್ನ ಟೈಪ್​ ಮಾಡುವಂತೆ ಕೇಳಲಾಗುತ್ತೆ. ಅಲ್ಲದೇ ನಿಮ್ಮ ಖಾತೆಯ ಸಂಖ್ಯೆ, ಐಎಫ್​ಎಸ್​ಸಿ ಕೋಡ್​, ಕಾರ್ಡ್​ ಸಂಖ್ಯೆ, ಸಿವಿವಿ ಹೀಗೆ ಎಲ್ಲಾ ಮಾಹಿತಿಯನ್ನ ಪಡೆದು ಮುಂದಿನ ದಿನಗಳಲ್ಲಿ ನಿಮಗೆ ಭಾರೀ ದೊಡ್ಡ ಆರ್ಥಿಕ ಹೊಡೆತ ನೀಡುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...