
ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ SBI ಗ್ರಾಹಕರಿಗೆ ವಿಶೇಷ ಕೊಡುಗೆ ಘೋಷಿಸಲಾಗಿದೆ. ಹಬ್ಬದ ಋತುವಿನಲ್ಲಿ ಯೋನೋ(YONO SBI) ಮೂಲಕ ಚಿನ್ನದ ಸಾಲದ ಜೊತೆಗೆ ಉತ್ತಮ ಕೊಡುಗೆಗಳನ್ನು ಕೂಡ ಪಡೆಯಬಹುದಾಗಿದೆ.
ನಿಮ್ಮ ಕನಸಿನ ಮನೆಯನ್ನು ಹೊಂದಲು ಎಸ್.ಬಿ.ಐ.ನಿಂದ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಯಾವುದೇ ಸಂಸ್ಕರಣಾ ಶುಲ್ಕ ಇರುವುದಿಲ್ಲ. 10 ಬಿಪಿಎಸ್(ಮೂಲಾಂಶ) ಬಡ್ಡಿ ರಿಯಾಯಿತಿ ಇರುತ್ತದೆ.. ಯೋನೋ ಎಸ್.ಬಿ.ಐ. ಮೂಲಕ ಸಾಲ ಪಡೆಯುವವರಿಗೆ ಹೆಚ್ಚುವರಿಯಾಗಿ 5 ಬಿಪಿಎಸ್ ನಷ್ಟು ಬಡ್ಡಿ ರಿಯಾಯಿತಿ ಇರುತ್ತದೆ ಎನ್ನಲಾಗಿದೆ.