ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್ಬಿಐ) ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ.
ಎಸ್ಬಿಐ ನಿಶ್ಚಿತ ಠೇವಣಿಗಳ ಬಡ್ಡಿದರ ಕಡಿಮೆ ಮಾಡಿದೆ. ನಿಶ್ಚಿತ ಠೇವಣಿ ಇಟ್ಟಿರುವ ಹಿರಿಯ ನಾಗರಿಕರಿಗೆ ಬಡ್ಡಿಯಿಂದ ಬರುವ ಆದಾಯದಲ್ಲಿ ನಷ್ಟವಾಗಲಿದೆ. ಎಫ್.ಡಿ. ಬಡ್ಡಿದರದಲ್ಲಿ ಶೇಕಡ 0.2 ರಷ್ಟು ಕಡಿತಗೊಳಿಸಲಾಗಿದೆ. ಹಿರಿಯ ನಾಗರಿಕರಿಗೆ ಬಡ್ಡಿದರ ಇಳಿಕೆ ಆಗದಂತೆ ನೋಡಿಕೊಳ್ಳಲು ಎಸ್.ಬಿ.ಐ. ವಿಕೇರ್ ಡಿಪಾಸಿಟ್ ಎಂಬ ಯೋಜನೆಯನ್ನು ಪರಿಚಯಿಸಿದೆ.
ಎಸ್.ಬಿ.ಐ ಗೃಹಸಾಲ ಇಎಂಐ ತಗ್ಗಿಸಲಾಗಿದೆ. ಎಂ.ಸಿ.ಎಲ್.ಆರ್. ಆಧಾರಿತ ಸಾಲಗಳ ಬಡ್ಡಿ ದರವನ್ನು ಶೇಕಡ 7.40 ರಿಂದ ಶೇಕಡ 7.25 ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ಇಎಂಐ ಪಾವತಿಸುವವರಿಗೆ ಅನುಕೂಲವಾಗಲಿದೆ.