ಭವಿಷ್ಯಕ್ಕಾಗಿ ಜನರು ಭದ್ರತೆಯ ಹಾಗೂ ಹೆಚ್ಚು ಲಾಭ ನೀಡುವ ಹೂಡಿಕೆಗೆ ಆದ್ಯತೆ ನೀಡುತ್ತಾರೆ. ಆದ್ರೆ ಕೆಲವೊಮ್ಮೆ ತಪ್ಪಾದ ಜಾಗದಲ್ಲಿ ಹೂಡಿಕೆ ಮಾಡಿ ನಷ್ಟ ಅನುಭವಿಸುತ್ತಾರೆ. ಹೂಡಿಕೆ ಮಾಡುವ ಮೊದಲು ಹೂಡಿಕೆ ಮಾಡುವ ಜಾಗದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕಾಗುತ್ತದೆ. ನೀವೂ ಹೂಡಿಕೆ ಮಾಡಲು ಬಯಸಿದ್ದರೆ ಎಸ್ಬಿಐನ ಎನ್ಯುಟಿ ಸ್ಕೀಂ ಒಳ್ಳೆಯದು.
ಎಸ್ಬಿಐ ಈ ಯೋಜನೆಯಲ್ಲಿ 36,60,84 ಮತ್ತು 120 ತಿಂಗಳ ಅವಧಿಗೆ ಹೂಡಿಕೆ ಮಾಡಲು ಅವಕಾಶ ನೀಡುತ್ತದೆ. ಸ್ಥಿರ ಠೇವಣಿಗೆ ಸಿಗುವ ಬಡ್ಡಿ ನಿಮಗೆ ಇದ್ರಲ್ಲೂ ಸಿಗುತ್ತದೆ. ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಿದ್ದರೆ, ಐದು ವರ್ಷಗಳ ಸ್ಥಿರ ಠೇವಣಿಗೆ ಸಿಗುವ ಬಡ್ಡಿ ನಿಮಗೆ ಇದರಲ್ಲೂ ಸಿಗುತ್ತದೆ.
ನಕಲಿ ಚಾಲನಾ ಪರವಾನಗಿ ಪತ್ತೆ ಹಚ್ಚೋದು ಈಗ ಬಲು ಸುಲಭ
ಹೂಡಿಕೆದಾರರು ಪ್ರತಿ ತಿಂಗಳು 10 ಸಾವಿರ ರೂಪಾಯಿ ಆದಾಯವನ್ನು ಬಯಸಿದರೆ, ಹೂಡಿಕೆದಾರರು 5 ಲಕ್ಷ 7 ಸಾವಿರದ 965 ರೂಪಾಯಿ ಮತ್ತು 93 ಪೈಸೆಗಳನ್ನು ಠೇವಣಿ ಇಡಬೇಕಾಗುತ್ತದೆ. ಠೇವಣಿ ಮಾಡಿದ ಮೊತ್ತದ ಮೇಲೆ ಶೇಕಡಾ 7 ರಷ್ಟು ಬಡ್ಡಿದರ ಸಿಗುತ್ತದೆ. ಇದರಿಂದ ಹೂಡಿಕೆದಾರ ಪ್ರತಿ ತಿಂಗಳು ಸುಮಾರು 10 ಸಾವಿರ ರೂಪಾಯಿಗಳನ್ನು ಗಳಿಸುತ್ತಾನೆ. ಒಟ್ಟಿಗೆ ಹೂಡಿಕೆ ಮಾಡಲು 5 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವಿದ್ದರೆ ನಿಮಗೆ ಇದು ಒಳ್ಳೆ ಆಯ್ಕೆ.
ಪ್ರತಿ ತಿಂಗಳು ಕನಿಷ್ಠ 1000 ರೂಪಾಯಿಗಳನ್ನು ಎಸ್‌ಬಿಐ ಎನ್ಯುಟಿ ಯೋಜನೆಯಲ್ಲಿ ಜಮಾ ಮಾಡಬಹುದು. ಇದರಲ್ಲಿ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಸಾಮಾನ್ಯವಾಗಿ ಮಧ್ಯಮ ವರ್ಗದ ಜನರಿಗೆ ಇಷ್ಟು ಹಣ ಒಟ್ಟಿಗೆ ಸಿಗುವುದು ಕಷ್ಟ. ಹಾಗಾಗಿ ಇದು ಮಧ್ಯಮವರ್ಗದವರಿಗೆ ಕಷ್ಟ.