alex Certify GOOD NEWS: ಡೆಬಿಟ್ ಕಾರ್ಡ್ ಅಲ್ಲ, ವಾಚ್ ಮೂಲಕ ಮಾಡಿ ಪೇಮೆಂಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ಡೆಬಿಟ್ ಕಾರ್ಡ್ ಅಲ್ಲ, ವಾಚ್ ಮೂಲಕ ಮಾಡಿ ಪೇಮೆಂಟ್

डेबिट कार्ड नहीं अब घड़ी से करिए पेमेंट, SBI ने शुरू की ये कमाल की सुविधा

ಶಾಪಿಂಗ್ ನಂತರ ಹಣ ಪಾವತಿಸಲು ಡೆಬಿಟ್ ಕಾರ್ಡ್ ಅಥವಾ ಮೊಬೈಲ್ ಫೋನ್ ಅಪ್ಲಿಕೇಶನ್ ಅಗತ್ಯವಿಲ್ಲ. ಈ ಕೆಲಸವನ್ನು ಈಗ ವಾಚ್ ಮೂಲಕ ಮಾಡಬಹುದು. ವಾಚ್ ದೈತ್ಯ ಟೈಟಾನ್ ಕಂಪನಿ ಮೊದಲ ಬಾರಿಗೆ ವಾಚ್ ಮೂಲಕ ಕಾಂಟ್ಯಾಕ್ಟ್ ಲೆಸ್ ಪೇಮೆಂಟ್ ಬೆಂಬಲಿಸುವ 5 ವಾಚ್ ಬಿಡುಗಡೆ ಮಾಡಿದೆ. ಈ ವೈಶಿಷ್ಟ್ಯಕ್ಕಾಗಿ, ಕಂಪನಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಒಪ್ಪಂದ ಮಾಡಿಕೊಂಡಿದೆ.

ಶಾಪಿಂಗ್ ನಂತರ ಹಣ ಪಾವತಿಸುವ ವೇಳೆ ಪಿಒಎಸ್ ಯಂತ್ರದ ಬಳಿ ಹೋಗಿ ಟೈಟಾನ್ ಪೇ ಪವರ್ ವಾಚ್ ಟ್ಯಾಪ್ ಮಾಡಿದ್ರೆ ಹಣ ಪಾವತಿಯಾಗುತ್ತದೆ. ಎಸ್‌ಬಿಐ ಕಾರ್ಡ್ ಹೊಂದಿರುವವರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. 2000 ರೂಪಾಯಿಗಳವರೆಗೆ ಶಾಪಿಂಗ್ ಮಾಡಿದ್ರೆ ಈ ಸೌಲಭ್ಯ ಸಿಗಲಿದೆ.

ಗಡಿಯಾರವನ್ನು ಟ್ಯಾಪ್ ಮಾಡುವ ಮೂಲಕ, ಪಾವತಿ ಮಾಡಬೇಕು.ಇದಕ್ಕೆ ಯಾವುದೇ ಪಿನ್ ಅಗತ್ಯವಿರುವುದಿಲ್ಲ. 2000 ರೂಪಾಯಿಗಳಿಗಿಂತ ಹೆಚ್ಚಿನ ಪಾವತಿ ವೇಳೆ ಪಿನ್ ನಮೂದಿಸಬೇಕಾಗುತ್ತದೆ. ಪುರುಷರಿಗಾಗಿ ಮೂರು ಹಾಗೂ ಮಹಿಳೆಯರಿಗಾಗಿ ಎರಡು ಡಿಸೈನ್ ನ ವಾಚನ್ನು ಕಂಪನಿ ಬಿಡುಗಡೆ ಮಾಡಿದೆ.‌ ಪುರುಷರ ವಾಚ್ ನ ಆರಂಭಿಕ ಬೆಲೆ 2,995 ರೂಪಾಯಿ. 3,995 ರೂಪಾಯಿ ಮತ್ತು 5,995 ರೂಪಾಯಿಗೆ ವಾಚ್ ಲಭ್ಯವಿದೆ. ಮಹಿಳೆಯರ ವಾಚ್ ಬೆಲೆ 3,895 ರೂಪಾಯಿ ಮತ್ತು 4,395 ರೂಪಾಯಿ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...