alex Certify SBI ಗ್ರಾಹಕರಿಗೆ ಸಂತಸದ ಸುದ್ದಿ: 45 ನಿಮಿಷದೊಳಗೆ ಸಿಗಲಿದೆ ಸಾಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SBI ಗ್ರಾಹಕರಿಗೆ ಸಂತಸದ ಸುದ್ದಿ: 45 ನಿಮಿಷದೊಳಗೆ ಸಿಗಲಿದೆ ಸಾಲ

ನೀವು ಎಸ್.ಬಿ.ಐ. ಗ್ರಾಹಕರಾ. ಹಾಗಾದ್ರೆ ಈ ಸುದ್ದಿ ಓದಲೇಬೇಕು. ಏಕೆಂದರೆ ಲಾಕ್ ಡೌನ್ ಸಮಯದಲ್ಲಿ ನಿಮಗಾಗಿ ಎಸ್.ಬಿ.ಐ. ಉತ್ತಮ ಸೇವೆಯೊಂದನ್ನು ನೀಡಿದೆ. ನಿಮಗೆ ಸಾಲ ನೀಡಲು ಎಸ್.ಬಿ.ಐ. ಬ್ಯಾಂಕ್ ಮುಂದಾಗಿದೆ. ಇದೇನಪ್ಪಾ ಅಂತೀರಾ ಮುಂದೆ ಓದಿ.

ಹೌದು, ಕೆಲವೇ ನಿಮಿಷಗಳಲ್ಲಿ ನಿಮಗೆ ಸಾಲ ನೀಡುವ ಸೇವೆಯೊಂದನ್ನು ಎಸ್.ಬಿ.ಐ. ನೀಡುತ್ತಿದೆ. ಕೇವಲ 45 ನಿಮಿಷಗಳಲ್ಲಿ ಸಾಲ ನೀಡುವ ತುರ್ತು ಸೇವೆಯನ್ನು ತನ್ನ ಗ್ರಾಹಕರಿಗೆ ನೀಡಲು ಮುಂದಾಗಿದೆ. ಇನ್ನೊಂದು ವಿಶೇಷ ಅಂದರೆ ಸಾಲ ಪಡೆದು ಆರು ತಿಂಗಳವರೆಗೆ ಇಎಂಐ ಕಟ್ಟುವ ಹಾಗಿಲ್ಲ. 6 ತಿಂಗಳ ಬಳಿಕ ಇಎಂಐ ಕಟ್ಟಬಹುದು.

ಇನ್ನು ಈ ವೈಯಕ್ತಿಕ ಸಾಲಕ್ಕಾಗಿ ಗ್ರಾಹಕರು ಶೇಕಡಾ 10.50 ರಷ್ಟು ಬಡ್ಡಿಯನ್ನು ಪಾವತಿಸಬೇಕು. ಇದಕ್ಕಾಗಿ ಬ್ಯಾಂಕ್ ಗೆ ಹೋಗುವ ಅವಶ್ಯಕತೆಯೂ ಇಲ್ಲ. ಮನೆಯಲ್ಲಿಯೇ ಕುಳಿತು ಆನ್ ಲೈನ್ ನಲ್ಲಿ ಅರ್ಜಿ ಹಾಕಬಹುದು. ದಿನದ 24 ಗಂಟೆಗಳು, ವಾರದ ಏಳು ದಿನಗಳು ಈ ಸಾಲಕ್ಕಾಗಿ ಅರ್ಜಿ ಹಾಕಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...