
ತನ್ನಲ್ಲಿಗೆ ಬರುವ ಗ್ರಾಹಕರ ಕೈಗಳಿಗೆ ಸ್ಯಾನಿಟೈಸರ್ ಹಾಕಲೆಂದು ಸೀರೆಯುಟ್ಟ ಪ್ರದರ್ಶನ ಗೊಂಬೆಗಳನ್ನು ಈ ಜವಳಿ ಅಂಗಡಿಯ ಆಡಳಿತ ಸಿಬ್ಬಂದಿ ನಿಲ್ಲಿಸಿದೆ.
ಈ ವಿಚಾರವನ್ನು ವಿಡಿಯೋ ರೂಪದಲ್ಲಿ ಹಂಚಿಕೊಂಡ IFS ಅಧಿಕಾರಿ ಸುಧಾ ರಾಮೆನ್, “ಸರಿಯಾದ ಉದ್ದೇಶಕ್ಕೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಸೀರೆಯುಟ್ಟ ಪ್ರದರ್ಶನ ಗೊಂಬೆ ಒಂದನ್ನು ಇಡಲಾಗಿದ್ದು, ಅದರ ಸುತ್ತ ಓಡಾಡುವ ಗ್ರಾಹಕರಿಗೆ ಸ್ಯಾನಿಟೈಸ್ ಮಾಡಲು ನೆರವಾಗುತ್ತಿದೆ. ಕೊರೊನಾ ನಂತರದ ದಿನಗಳಲ್ಲಿ ತಂತ್ರಜ್ಞಾನವನ್ನು ಇನ್ನಷ್ಟು ಆಳವಾಗಿ ಬಳಸುವುದನ್ನು ನೋಡಬಹುದು” ಎಂದು ತಿಳಿಸಿದ್ದಾರೆ.