alex Certify ಸ್ಯಾಮ್ಸಂಗ್ ಬಳಕೆದಾರರಿಗೆ ಬ್ಯಾಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಯಾಮ್ಸಂಗ್ ಬಳಕೆದಾರರಿಗೆ ಬ್ಯಾಡ್ ನ್ಯೂಸ್

ಸ್ಯಾಮ್ಸಂಗ್‌ ತನ್ನ ಲಕ್ಷಾಂತರ ಬಳಕೆದಾರರಿಗೆ ಬೇಸರದ ಸುದ್ದಿ ನೀಡಿದೆ. ಜೂನ್ 1 ರಿಂದ ವಿಶೇಷ ವೈಶಿಷ್ಟ್ಯವನ್ನು ಸ್ಯಾಮ್ಸಂಗ್ ನಿಲ್ಲಿಸಿದೆ. ದಕ್ಷಿಣ ಕೊರಿಯಾದ ದೈತ್ಯ ಸ್ಯಾಮ್ಸಂಗ್ ತನ್ನ ನಿರ್ದಿಷ್ಟ ಸೇವೆಗೆ ಬೆಂಬಲವನ್ನು ನಿಲ್ಲಿಸುತ್ತಿದೆ. ಜೂನ್ 1 ರಿಂದ  ಎಸ್ ವಾಯ್ಸ್ ಅಸಿಸ್ಟೆಂಟ್  ಕೆಲಸ ಮಾಡುವುದಿಲ್ಲ.

ಸ್ಯಾಮ್ಸಂಗ್ ತನ್ನ ಸ್ಮಾರ್ಟ್ಫೋನ್ ಗಳ ಪಟ್ಟಿಯನ್ನು ವೆಬ್ಸೈಟ್ ನಲ್ಲಿ ನೀಡಿದೆ. ಯಾವ ಫೋನ್ ಗಳಲ್ಲಿ ಎಸ್ ವಾಯ್ಸ್ ಕೆಲಸ ಮಾಡುವುದಿಲ್ಲ ಎಂಬುದನ್ನು ಹೇಳಿದೆ. ಗ್ಯಾಲಕ್ಸಿ ಎ 3 ಸೇರಿದಂತೆ ಗ್ಯಾಲಕ್ಸಿ ಎ 5, ಗ್ಯಾಲಕ್ಸಿ ಎ 7, ಗ್ಯಾಲಕ್ಸಿ ಎ 8, ಗ್ಯಾಲಕ್ಸಿ ಎ 9, ಗ್ಯಾಲಕ್ಸಿ ನೋಟ್ ಎಫ್‌ಇ, ಗ್ಯಾಲಕ್ಸಿ ನೋಟ್ 5, ಗ್ಯಾಲಕ್ಸಿ ನೋಟ್ 4, ಗ್ಯಾಲಕ್ಸಿ ನೋಟ್ 3, ಗ್ಯಾಲಕ್ಸಿ ನೋಟ್ 2, ಗ್ಯಾಲಕ್ಸಿ ಎಸ್ 7, ಗ್ಯಾಲಕ್ಸಿ ಎಸ್ 7 ಎಡ್ಜ್, ಗ್ಯಾಲಕ್ಸಿ ಎಸ್ 6, ಗ್ಯಾಲಕ್ಸಿ ಎಸ್ 6 ಎಡ್ಜ್, ಗ್ಯಾಲಕ್ಸಿ ಎಸ್ 5 , ಗ್ಯಾಲಕ್ಸಿ ಎಸ್ 4 ಫೋನ್ ಗಳಲ್ಲಿ ಕೆಲಸ ಮಾಡುವುದಿಲ್ಲ.

ಮಾಹಿತಿಗಾಗಿ, 2017 ರ ನಂತರ ಬರುವ ಎಲ್ಲಾ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಪನಿಯು ಎಸ್-ವಾಯ್ಸ್ ಬದಲಿಗೆ ಬಿಕ್ಸ್‌ಬಿಯ ವೈಶಿಷ್ಟ್ಯವನ್ನು ನೀಡಲು ಪ್ರಾರಂಭಿಸಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...