alex Certify ರಷ್ಯಾ-ಉಕ್ರೇನ್ ಯುದ್ಧದಿಂದ ಭಾರತಕ್ಕೆ 4-6 ಲಕ್ಷ ಟನ್ ಕಚ್ಚಾ ಸೂರ್ಯಕಾಂತಿ ಎಣ್ಣೆ ಕೊರತೆ: ಇನ್ನೂ ದುಬಾರಿಯಾಗಲಿದೆ ಖಾದ್ಯ ತೈಲ ದರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಷ್ಯಾ-ಉಕ್ರೇನ್ ಯುದ್ಧದಿಂದ ಭಾರತಕ್ಕೆ 4-6 ಲಕ್ಷ ಟನ್ ಕಚ್ಚಾ ಸೂರ್ಯಕಾಂತಿ ಎಣ್ಣೆ ಕೊರತೆ: ಇನ್ನೂ ದುಬಾರಿಯಾಗಲಿದೆ ಖಾದ್ಯ ತೈಲ ದರ

ನವದೆಹಲಿ: ರಷ್ಯಾ-ಉಕ್ರೇನ್ ಸಂಘರ್ಷದಿಂದ ಭಾರತಕ್ಕೆ 4-6 ಲಕ್ಷ ಟನ್ ಕಚ್ಚಾ ಸೂರ್ಯಕಾಂತಿ ಎಣ್ಣೆ ಕೊರತೆ ಉಂಟಾಗಲಿದೆ. ಏಪ್ರಿಲ್ 1 ರಿಂದ ಪ್ರಾರಂಭವಾಗುವ ಹಣಕಾಸು ವರ್ಷದಲ್ಲಿ ಭಾರತಕ್ಕೆ ಕನಿಷ್ಠ 4-6 ಲಕ್ಷ ಟನ್ ಕಚ್ಚಾ ಸೂರ್ಯಕಾಂತಿ ಎಣ್ಣೆಯ ಪೂರೈಕೆ ಕೊರತೆಗೆ ಕಾರಣವಾಗಬಹುದು ಎಂದು ಕ್ರಿಸಿಲ್ ರೇಟಿಂಗ್ಸ್ ಮಾಹಿತಿ ನೀಡಿದೆ.

ಈ ಬೆಳವಣಿಗೆಯಿಂದ ದೇಶೀಯ ಖಾದ್ಯ ತೈಲ ಸಂಸ್ಕರಣೆ ಉತ್ಪಾದನಾ ಯೋಜನೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಕ್ರಿಸಿಲ್ ವರದಿಯಲ್ಲಿ ತಿಳಿಸಿದೆ.

ದೀರ್ಘಕಾಲದ ವ್ಯಾಪಾರದ ಅಡಚಣೆಯಿಂದ ಅರ್ಜೆಂಟೈನಾದಿಂದ ಹೆಚ್ಚು ಕಚ್ಚಾ ಸೂರ್ಯಕಾಂತಿ ಎಣ್ಣೆಯನ್ನು ಪಡೆಯಲು ಮುಂದಾದರೂ ಅದು ಉಕ್ರೇನ್ -ರಷ್ಯಾದಿಂದ ಪೂರೈಕೆಯಾಗುವ ಪ್ರಮಾಣದಲ್ಲಿನ ಕೊರತೆಯನ್ನು ಸರಿದೂಗಿಸಲು ಸಾಕಾಗುವುದಿಲ್ಲ.

ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯು ಭಾರತದ ವಾರ್ಷಿಕ 230-240 ಲಕ್ಷ ಟನ್‌ ಗಳಷ್ಟು ಖಾದ್ಯ ತೈಲಗಳ (ಎಲ್ಲಾ ಪ್ರಕಾರದ) ಬಳಕೆಯ ಶೇಕಡ 10 ರಷ್ಟಿದೆ. ದೇಶವು ತನ್ನ ಖಾದ್ಯ ತೈಲದ ಅಗತ್ಯತೆಯ ಸುಮಾರು 60 ಪ್ರತಿಶತವನ್ನು ಆಮದು ಮಾಡಿಕೊಳ್ಳುತ್ತದೆ,

ಭಾರತದ ವಾರ್ಷಿಕ 22-23 ಲಕ್ಷ ಟನ್‌ ಗಳ ಕಚ್ಚಾ ಸೂರ್ಯಕಾಂತಿ ಎಣ್ಣೆಯ 90 ಪ್ರತಿಶತದಷ್ಟು ಉಕ್ರೇನ್(70 ಪ್ರತಿಶತ) ಮತ್ತು ರಷ್ಯಾ (20 ಪ್ರತಿಶತ) ಮತ್ತು ಉಳಿದವು ಅರ್ಜೆಂಟೀನಾ ಮತ್ತು ಇತರ ದೇಶಗಳಿಂದ ಬರುತ್ತದೆ. ಒಟ್ಟಾರೆಯಾಗಿ, ಉಕ್ರೇನ್ ಮತ್ತು ರಷ್ಯಾ ವಾರ್ಷಿಕವಾಗಿ ಸುಮಾರು 100 ಲಕ್ಷ ಟನ್‌ ಗಳಷ್ಟು ಕಚ್ಚಾ ಸೂರ್ಯಕಾಂತಿ ಎಣ್ಣೆಯನ್ನು ರಫ್ತು ಮಾಡುತ್ತವೆ, ಅರ್ಜೆಂಟೀನಾ 7 ಲಕ್ಷ ಟನ್‌ ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ದೇಶೀಯ ಖಾದ್ಯ ತೈಲ ಸಂಸ್ಕರಣ ಘಟಕಗಳು ಸಾಮಾನ್ಯವಾಗಿ 30-45 ದಿನಗಳ ಕಚ್ಚಾ ವಸ್ತುಗಳ ದಾಸ್ತಾನುಗಳನ್ನು ನಿರ್ವಹಿಸುತ್ತವೆ. ಸಂಘರ್ಷ ದೀರ್ಘಾವಧಿ ಮುಂದುವರೆದರೆ ಪೂರೈಕೆ ಕೊರತೆ ಮತ್ತು ಬೆಲೆಗಳ ಏರಿಕೆಗೆ ಕಾರಣವಾಗುತ್ತದೆ. ಈ ಹಣಕಾಸು ವರ್ಷದಲ್ಲಿ ಸಂಸ್ಕರಿಸಿದ ಖಾದ್ಯ ತೈಲಗಳ ಸರಾಸರಿ ಬೆಲೆಯಲ್ಲಿ ಶೇಕಡ 25 ರಷ್ಟು ಹೆಚ್ಚಳವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...