ಕೊಪ್ಪಳ: ಬೆಂಗಳೂರು ಸಾರಿಗೆ ಇಲಾಖೆಯ ಆಯುಕ್ತರ ಕಚೇರಿಯ ಸುತ್ತೋಲೆಯಂತೆ ಸಾರಿಗೆ ಇಲಾಖೆಯ ಸಂಪರ್ಕರಹಿತ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಸಾರಥಿ-4 ತಂತ್ರಾಂಶವನ್ನು ಬಳಸುವಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಕಲಿಕಾ ಪರವಾನಿಗೆ ಎಲ್ಲಾ ಸೇವೆಗಳು, ಚಾಲನಾ ಅನುಜ್ಞಾ ಪತ್ರ ನವೀಕರಣ, ಚಾಲನಾ ಅನುಜ್ಞಾ ಪತ್ರದಲ್ಲಿ ವಿಳಾಸ ಬದಲಾವಣೆ, ಚಾಲನಾ ಅನುಜ್ಞಾ ಪತ್ರದಲ್ಲಿ ಹೆಸರು ಬದಲಾವಣೆ, ಚಾಲನಾ ಅನುಜ್ಞಾ ಪತ್ರದ ನಕಲಿ ಪ್ರತಿ ಸೇವೆಗಳಿಗೆ ಸಾರಥಿ-4 ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕವೇ ಅರ್ಜಿ ನೋಂದಾಯಿಸಿ ಸಂಬಂಧಿಸಿದ ದಾಖಲಾತಿಗಳನ್ನು ಅಪ್‌ಲೋಡ್ ಮಾಡುವ ಮೂಲಕ ಇಲಾಖೆಯ ಸೇವೆಗಳನ್ನು ಪಡೆಯಲು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ.
ಆದ್ದರಿಂದ ಇಲಾಖೆಯ ಜಾಲತಾಣ www.parivahan.gov.in ನಲ್ಲಿ ಸಂಪರ್ಕರಹಿತವಾಗಿ ಸಾರಿಗೆ ಇಲಾಖೆ ಸೇವೆಗಳನ್ನು ಪಡೆಯಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.