ಆರ್ಟಿಜಿಎಸ್ ತಾಂತ್ರಿಕ ಅಪ್ಗ್ರೇಡ್ ಕಾರಣದಿಂದ ಏಪ್ರಿಲ್ 18 ರಂದು ಸೇವೆಯಲ್ಲಿ ವ್ಯತ್ಯಯವಾಗಲಿದೆ. ಕನಿಷ್ಟ 14 ಗಂಟೆಗಳ ಕಾಲ ಸೇವೆ ಲಭ್ಯವಿರಲ್ಲ. ಇದು ರಿಕವರಿ ಆಗಲು ಸಮಯ ಹಿಡಿಯುತ್ತದೆ. ಹೀಗಾಗಿ ಆರ್ಟಿಜಿಎಸ್ ಸೌಕರ್ಯ ಕನಿಷ್ಟ 14 ಗಂಟೆಗಳ ಕಾಲ ಲಭ್ಯರಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ನೀಡಿದೆ.
ಬ್ಯಾಂಕ್ ಗ್ರಾಹಕರಿಗೆ ಈ ಬಗ್ಗೆ ಮಾಹಿತಿಯನ್ನ ನೀಡಬೇಕು. ಗ್ರಾಹಕರು ಭಾನುವಾರದ ಆರ್ಟಿಜಿಎಸ್ ಕಾರ್ಯಗಳಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೇಳಲಾಗಿದೆ. RTGS ಸೇವೆಯಲ್ಲಿ ವ್ಯತ್ಯಯವಾದರೂ, ಎನ್ಇಎಫ್ಟಿ ಸೇವೆ ಎಂದಿನಂತೆಯೇ ಲಭ್ಯವಿರಲಿದೆ ಎಂದು RBI ಹೇಳಿದೆ.
ಕಳೆದ ವಾರವಷ್ಟೇ ಆರ್ಟಿಜಿಎಸ್ ಹಾಗೂ ಎನ್ಇಎಫ್ಟಿ ಸೌಕರ್ಯವನ್ನ ನಾನ್ ಬ್ಯಾಂಕಿಂಗ್ ಪಾವತಿ ವ್ಯವಸ್ಥೆಗಳಿಗೂ ವಿಸ್ತರಣೆಮಾಡಲಾಗಿದೆ. ಇಲ್ಲಿಯವರೆಗೆ ಕೇವಲ ಬ್ಯಾಂಕ್ಗಳು ಮಾತ್ರ ಆರ್ಟಿಜಿಎಸ್ ಹಾಗೂ ಎನ್ಇಎಫ್ಟಿ ಪಾವತಿ ವ್ಯವಸ್ಥೆಯನ್ನ ಹೊಂದಿದ್ದವು. ಆದರೆ ಆರ್ಬಿಐನ ಹೇಳಿಕೆಯ ಬಳಿಕ ಈ ಸೌಕರ್ಯ ಕಾರ್ಡ್ ನೆಟ್ವರ್ಕ್, ವೈಟ್ ಲೇಬಲ್, ಪ್ರೀಪೇಯ್ಡ್ ಪೇಮೆಂಟ್ ಸಾಧನ, ಟ್ರೇಡ್ ರೀಸಿವೆಬಲ್ಸ್ ಡಿಸ್ಕೌಂಟಿಂಗ್ ಸಿಸ್ಟೆಮ್ಗಳಿಗೂ ವ್ಯಾಪಿಸಿತ್ತು.
ಪಾವತಿ ವ್ಯವಸ್ಥೆಯಲ್ಲಿ ನಾನ್ ಬ್ಯಾಂಕ್ಗಳೂ ಭಾಗವಹಿಸಬೇಕು ಎಂಬ ಕಾರಣಕ್ಕೆ ಈ ಮಹತ್ವದ ಕ್ರಮವನ್ನ ಕೈಗೊಂಡಿತ್ತು. ಆರ್ಬಿಐನ ಈ ಸಕಾರಾತ್ಮಕ ಬೆಳವಣಿಗೆಯಿಂದಾಗಿ ದೇಶದ ಆರ್ಥಿಕತೆಗೆ ಬಹುದೊಡ್ಡ ಲಾಭ ಸಿಗಲಿದೆ ಎಂದು ಅಂದಾಜಿಸಲಾಗಿದೆ.