
ಕರೊನಾ ಸಂಕಷ್ಟದ ನಡುವೆಯೂ ಕೇಂದ್ರ ಸರ್ಕಾರ ತನ್ನ ನೌಕರರಿಗೆ 3737 ಕೋಟಿ ರೂಪಾಯಿ ಬೋನಸ್ ವಿತರಣೆಗೆ ಒಪ್ಪಿಗೆ ನೀಡಿದೆ. ವಿಜಯದಶಮಿಗೂ ಮುನ್ನವೇ ದೀಪಾವಳಿ ಬೋನಸ್ ಕೇಂದ್ರ ಸರ್ಕಾರಿ ನೌಕರರ ಖಾತೆಗೆ ಸೇರಲಿದೆ.
3737 ಕೋಟಿ ರೂಪಾಯಿ ವೆಚ್ಚದಲ್ಲಿ ಕೇಂದ್ರದ ನೌಕರರಿಗೆ ಬೋನಸ್ ನೀಡಲಾಗ್ತಾ ಇದ್ದು ಉತ್ಪಾದಕತೆ ಆಧಾರಿತ ಬೋನಸ್ಗೆ ಅರ್ಹರಾಗಿರುವ ರೈಲ್ವೇ, ಅಂಚೆ, ಇಸಿಐಸಿಎಂ ವಾಣಿಜ್ಯ ಇಲಾಖೆ, ಇಪಿಎಫ್ಓದಲ್ಲಿರುವ ಒಟ್ಟು 16.97 ಲಕ್ಷ ನೌಕರರಿಗೆ 2791 ಕೋಟಿ ರೂ. ಹಾಗೂ ಪಿಎಲ್ಬಿಯೇತರ 13.70 ಲಕ್ಷ ನೌಕರರಿಗೆ 946 ಕೋಟಿ ರೂ. ಬೋನಸ್ ದೊರೆಯಲಿದೆ ಅಂತಾ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಮಾಹಿತಿ ನೀಡಿದ್ದಾರೆ.