alex Certify ಮಾಸ್ಕ್ ಚೆಕ್ ಮಾಡಲು ಬಂದಿದೆ ಮಹಿಳಾ‌ ರೋಬೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್ ಚೆಕ್ ಮಾಡಲು ಬಂದಿದೆ ಮಹಿಳಾ‌ ರೋಬೋ…!

ಕೊರೊನಾ ಬಂದ ಬಳಿಕ‌ ಸೋಂಕು‌ ತಡೆಗಟ್ಟಲು ಹಾಗೂ ಮಾರ್ಗಸೂಚಿ ಪಾಲಿಸುವುದಕ್ಕೆ‌ ತಂತ್ರಜ್ಞಾನದ‌ ಮೊರೆ ಹೋಗಿದ್ದಾರೆ. ಇದಕ್ಕೆ ಇದೀಗ ಮತ್ತೊಂದು ಸೇರ್ಪಡೆಯಾಗಿದೆ.

ಹೌದು, ತಮಿಳುನಾಡಿನ ತಿರುಚಿರಾಪಳ್ಳಿಯ‌ ಬಟ್ಟೆ ಅಂಗಡಿಯ ಲ್ಲಿ ಮಾನವ ಗಾತ್ರದ ರೋಬೋ ಒಂದನ್ನು ಇಡಲಾಗಿದೆ. ಇದಕ್ಕೆ ಝಫೀರಾ ಎಂದು ಹೆಸರಿಡಲಾಗಿದೆ. ಈ ರೋಬೋ ಅಂಗಡಿಗೆ ಬರುವ ಪ್ರತಿಯೊಬ್ಬರು ಮಾಸ್ಕ್‌ ಧರಿಸಿದ್ದಾರೆಯೇ? ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆಯೇ ಎಂದು ನೋಡುತ್ತದೆ. ಇದರೊಂದಿಗೆ ಬರುವ ಎಲ್ಲರ ಉಷ್ಣಾಂಶವನ್ನು ಪರೀಕ್ಷೆ ಮಾಡುತ್ತದೆ. ಈ ವೇಳೆ ಅಂಗಡಿಯಲ್ಲಿ ಎಲ್ಲರೂ ಕೊರೊನಾ ಮಾರ್ಗಸೂಚಿ ಪಾಲಿಸುತ್ತಾರೆ ಎನ್ನುವುದನ್ನು ಹೇಳುತ್ತಲಿರುತ್ತದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಝಫೀ ರೊಬೊಟ್ಸ್ ಸಂಸ್ಥೆ ಸಿಇಒ ಆಶೀಕ್ ರಹಮಾನ್, ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಆರ್ಟಿಫಿಯಲ್ ಇಂಟಲಿಜೆನ್ಸ್ ಬಳಸಿಕೊಂಡು ಈ ರೋಬೋ‌ ತಯಾರಿಸಲಾಗಿದೆ. ಈ ರೋಬೋ ಅಂಗಡಿಗೆ ಬರುವ ಪ್ರತಿಯೊಬ್ಬ ಗ್ರಾಹಕರ ಸಂಖ್ಯೆ ಹಾಗೂ ಅವರ ಚಲನವಲನದ ಮೇಲೆ ಕಣ್ಣಿಡಲಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...