alex Certify ಫೇರ್‌ ಅಂಡ್‌ ಲವ್ಲಿ ಹೊಸ ಹೆಸರಿಗೆ ನೆಟ್ಟಿಗರ ತಕರಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೇರ್‌ ಅಂಡ್‌ ಲವ್ಲಿ ಹೊಸ ಹೆಸರಿಗೆ ನೆಟ್ಟಿಗರ ತಕರಾರು

ಫೇರ್ ‌ನೆಸ್ ಕ್ರೀಂಗಳ ವೈಭವೀಕರಣ ಹಾಗೂ ಶ್ವೇತವರ್ಣದ ಮೇಲಿನ ವ್ಯಾಮೋಹ ನಮ್ಮ ದೇಶದಲ್ಲಿ ಇಂದು ನೆನ್ನೆಯ ಕಥೆಯೇನಲ್ಲ. ಮಾಧ್ಯಮಗಳಲ್ಲಿ ಈ ಕ್ರೀಂಗಳ ಜಾಹೀರಾತು ಮಾಡುವುದು ಒಂದು ದೊಡ್ಡ ಬ್ಯುಸಿನೆಸ್ ಆಗಿಬಿಟ್ಟಿದೆ.

ಇದೇ ಭರದಲ್ಲಿ ಕೃಷ್ಣವರ್ಣೀಯ ಜನರನ್ನು ಕೀಳರಿಮೆಯಿಂದ ಕಾಣಲಾಗುತ್ತಿದೆ ಎಂಬ ಆಪಾದನೆಗಳು ನಾನಾ ವಲಯಗಳಿಂದ ಸಾಕಷ್ಟು ಸದ್ದು ಮಾಡುತ್ತಲೇ ಬಂದಿದ್ದವು. ಇದೀಗ ಆ ಆಪಾದನೆಯಿಂದ ಹೊರಬರುವ ಭರದಲ್ಲಿ, ಹಿಂದೂಸ್ತಾನ್‌ ಯುನಿಲಿವರ್‌ ತನ್ನ ಉತ್ಪನ್ನವಾದ “Fair and Lovely”ಯನ್ನು ‘Glow and Lovely’ ಎಂದು ಬದಲಿಸಲು ಇಚ್ಛಿಸಿದೆ.

ಕ್ರಿಯಾಪದವಾದ Glow ಹಾಗೂ ಗುಣವಾಚಕ ಪದವಾದ lovely ಜೊತೆಗೆ ಈ ‘Glow and Lovely’ ಎಂಬ ಹೆಸರಿನಲ್ಲಿ ಸರಿಯಾಗೇ ಬೆಸೆದುಕೊಳ್ಳುತ್ತಿಲ್ಲ ಎಂದು ವ್ಯಾಕರಣ ಪ್ರಿಯರು ಅಂಬೋಣವೆತ್ತಿದ್ದಾರೆ. ದೊಡ್ಡ ಮಾರುಕಟ್ಟೆ ಇರುವ ಒಂದು ಬ್ರಾಂಡ್ ಆಗಿ ಹೀಗೆ ಮಾಡಿದರೆ ಹೇಗೆ ಎನ್ನುತ್ತಿರುವ ನೆಟ್ಟಿಗರು, ಈ ಉತ್ಪನ್ನದ ಹೊಸ ಹೆಸರನ್ನು ಸರಿ ಮಾಡಲು ಸಾಕಷ್ಟು ಸಲಹೆಗಳನ್ನು ಕೊಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...