ಫೇರ್ ನೆಸ್ ಕ್ರೀಂಗಳ ವೈಭವೀಕರಣ ಹಾಗೂ ಶ್ವೇತವರ್ಣದ ಮೇಲಿನ ವ್ಯಾಮೋಹ ನಮ್ಮ ದೇಶದಲ್ಲಿ ಇಂದು ನೆನ್ನೆಯ ಕಥೆಯೇನಲ್ಲ. ಮಾಧ್ಯಮಗಳಲ್ಲಿ ಈ ಕ್ರೀಂಗಳ ಜಾಹೀರಾತು ಮಾಡುವುದು ಒಂದು ದೊಡ್ಡ ಬ್ಯುಸಿನೆಸ್ ಆಗಿಬಿಟ್ಟಿದೆ.
ಇದೇ ಭರದಲ್ಲಿ ಕೃಷ್ಣವರ್ಣೀಯ ಜನರನ್ನು ಕೀಳರಿಮೆಯಿಂದ ಕಾಣಲಾಗುತ್ತಿದೆ ಎಂಬ ಆಪಾದನೆಗಳು ನಾನಾ ವಲಯಗಳಿಂದ ಸಾಕಷ್ಟು ಸದ್ದು ಮಾಡುತ್ತಲೇ ಬಂದಿದ್ದವು. ಇದೀಗ ಆ ಆಪಾದನೆಯಿಂದ ಹೊರಬರುವ ಭರದಲ್ಲಿ, ಹಿಂದೂಸ್ತಾನ್ ಯುನಿಲಿವರ್ ತನ್ನ ಉತ್ಪನ್ನವಾದ “Fair and Lovely”ಯನ್ನು ‘Glow and Lovely’ ಎಂದು ಬದಲಿಸಲು ಇಚ್ಛಿಸಿದೆ.
ಕ್ರಿಯಾಪದವಾದ Glow ಹಾಗೂ ಗುಣವಾಚಕ ಪದವಾದ lovely ಜೊತೆಗೆ ಈ ‘Glow and Lovely’ ಎಂಬ ಹೆಸರಿನಲ್ಲಿ ಸರಿಯಾಗೇ ಬೆಸೆದುಕೊಳ್ಳುತ್ತಿಲ್ಲ ಎಂದು ವ್ಯಾಕರಣ ಪ್ರಿಯರು ಅಂಬೋಣವೆತ್ತಿದ್ದಾರೆ. ದೊಡ್ಡ ಮಾರುಕಟ್ಟೆ ಇರುವ ಒಂದು ಬ್ರಾಂಡ್ ಆಗಿ ಹೀಗೆ ಮಾಡಿದರೆ ಹೇಗೆ ಎನ್ನುತ್ತಿರುವ ನೆಟ್ಟಿಗರು, ಈ ಉತ್ಪನ್ನದ ಹೊಸ ಹೆಸರನ್ನು ಸರಿ ಮಾಡಲು ಸಾಕಷ್ಟು ಸಲಹೆಗಳನ್ನು ಕೊಡುತ್ತಿದ್ದಾರೆ.
https://twitter.com/samikshagoel2/status/1278751959965523968?ref_src=twsrc%5Etfw%7Ctwcamp%5Etweetembed%7Ctwterm%5E1278751959965523968%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Frip-grammar-netizens-point-out-faux-pas-in-the-recently-coined-name-glow-and-lovely%2F615940
https://www.instagram.com/p/CCLFq4knYw1/?utm_source=ig_embed