ಟಿಕ್‌ಟಾಕ್‌ನ ಮಾತೃಸಂಸ್ಥೆ ’ಬೈಟ್‌ಡ್ಯಾನ್ಸ್’ನ ಸಿಇಓ ಹುದ್ದೆಗೆ ರಾಜೀನಾಮೆ ಕೊಟ್ಟಿರುವ ಝಾಂಗ್ ಯಿಮಿಂಗ್, ತಮಗೆ ’ಓದಲು’ ಹಾಗೂ ’ಹಗಲುಗನಸು’ ಕಾಣಲು ಹೆಚ್ಚು ಸಮಯ ಬೇಕಾಗಿದೆ ಎಂದು ಕಾರಣ ಕೊಟ್ಟಿದ್ದಾರೆ.
ಯಿಮಿಂಗ್‌ರಿಂದ 2012ರಲ್ಲಿ ಸ್ಥಾಪನೆಗೊಂಡ ಟಿಕ್‌ಟಾಕ್, ಸಿಇಓ ಹುದ್ದೆ ನಿಭಾಯಿಸಲು ತಮ್ಮಲ್ಲಿ ಕ್ಷಮತೆಯಿಲ್ಲ ಎಂದು ಹೇಳಿಕೊಂಡಿದ್ದು, ಇದರೊಂದಿಗೆ ತಮಗಿಷ್ಟವಾದ ಕೆಲಸ ಮಾಡಲು ಸಾಕಷ್ಟು ಸಮಯ ಸಿಗುತ್ತಿಲ್ಲವೆಂದಿದ್ದು, ತಮ್ಮ ಹಳೆಯ ದಿನಗಳಂತೆ ’ಹಗಲುಗನಸು’ ಕಾಣಲು ಇಷ್ಟಪಡುವುದಾಗಿ ಹೇಳಿದ್ದಾರೆ.
ರಾಜ್ಯದಲ್ಲಿ ಹಾಲಾಹಲ: ಹಾಲು ಉತ್ಪಾದಕರಿಗೆ ಬಿಗ್ ಶಾಕ್, ವಾರದಲ್ಲಿ 2 ದಿನ ಖರೀದಿ ಸ್ಥಗಿತ ಸಾಧ್ಯತೆ
“ಸತ್ಯವೇನೆಂದರೆ, ಒಬ್ಬ ಯೋಗ್ಯ ಮ್ಯಾನೇಜರ್ ಆಗಲು ಬೇಕಿರುವ ಕೌಶಲ್ಯ ನನ್ನಲ್ಲಿ ಇಲ್ಲ. ಆಯೋಜನೆ ಹಾಗೂ ಮಾರುಕಟ್ಟೆಯ ನೀತಿಗಳ ಮೇಲೆ ನನಗೆ ಆಸಕ್ತಿ ಇದೆಯೇ ಹೊರತು ಜನರನ್ನು ನಿಭಾಯಿಸಲು ಅಲ್ಲ. ಹೀಗೆಯೇ, ನಾನು ಅಷ್ಟು ಸಂಘಜೀವಿಯೂ ಅಲ್ಲ ಮತ್ತು ಆನ್ಲೈನ್‌ನಲ್ಲಿರುವುದು, ಓದುವುದು, ಸಂಗೀತ ಕೇಳುವುದು ಹಾಗೂ ಏನೆಲ್ಲಾ ಮಾಡಬಹುದು ಎಂದು ಹಗಲುಗನಸು ಕಾಣಲು ಆದ್ಯತೆ ಕೊಟ್ಟುಕೊಳ್ಳುತ್ತೇನೆ” ಎಂದು ತಮ್ಮ ಪತ್ರದಲ್ಲಿ ಯಿಮಿಂಗ್ ಬರೆದುಕೊಂಡಿದ್ದಾರೆ.
ಶ್ವಾನದ ಜೊತೆ ವಿಡಿಯೋ ಮಾಡಲು ಹೋಗಿ ಜೈಲುಪಾಲಾದ ಯುಟ್ಯೂಬರ್
$44 ಶತಕೋಟಿ ಮೌಲ್ಯದ ಸಂಸ್ಥೆಯ ಸಿಇಓ ಆಗಲು ಅಗತ್ಯವಿರುವ ತಾಂತ್ರಿಕ ನೈಪುಣ್ಯತೆ ತಮ್ಮಲ್ಲಿ ಇಲ್ಲವೆಂದ ಯಿಮಿಂಗ್, ತಮ್ಮ ಸ್ಥಾನಕ್ಕೆ ಲಿಯಾಂಗ್ ರೂಬೋರ ಹೆಸರನ್ನು ಸೂಚಿಸಿದ್ದಾರೆ. ಸದ್ಯಕ್ಕೆ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ರೂಬೋ, ವರ್ಷಾಂತ್ಯಕ್ಕೆ ಯಿಮಿಂಗ್ ಸ್ಥಾನ ತೆರವುಗೊಳಿಸಿದ ಬಳಿಕ ಅವರ ಸ್ಥಾನದಲ್ಲಿ ಬರಲಿದ್ದಾರೆ.