ಬೆಂಗಳೂರು: ಕರ್ನಾಟಕ ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತರುವ ಮೂಲಕ ಸೇಲ್ ಅಗ್ರಿಮೆಂಟ್ ಕಾನೂನು ಬದ್ಧಗೊಳಿಸಿದೆ.
ಈ ಮೂಲಕ ನಿವೇಶನ, ಫ್ಲಾಟ್ ಖರೀದಿಸುವವರಿಗೆ ರಕ್ಷಣೆ ನೀಡಿದೆ. ಛಾಪಾ ಕಾಗದದ ಮೇಲೆ ಮಾಡಿಕೊಂಡ ಕ್ರಯ ಒಪ್ಪಂದವನ್ನು ಕಾನೂನುಬದ್ಧ ದಾಖಲೆ ಎಂದು ಪರಿಗಣಿಸಲಾಗುತ್ತಿರಲಿಲ್ಲ. ಇನ್ನು ಮುಂದೆ ಸರ್ಕಾರದಿಂದಲೇ ನಿಗದಿತ ಅರ್ಜಿ ನಮೂನೆ ನೀಡಲಿದ್ದು ಅದರಲ್ಲಿ ಒಪ್ಪಂದ ಮಾಡಿಕೊಳ್ಳಬೇಕು. ಆಗ ಮಾನ್ಯತೆ ಸಿಗಲಿದೆ. ರೇರಾ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಖರೀದಿದಾರರು ಮತ್ತು ಮಾರಾಟಗಾರರಿಗೆ ಅನುಕೂಲವಾಗುತ್ತದೆ ಎನ್ನಲಾಗಿದೆ.