
ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಎರಡು ಯೋಜನೆಗಳನ್ನು ನಿಲ್ಲಿಸುವುದಾಗಿ ಘೋಷಿಸಿದೆ. 49 ರೂಪಾಯಿ ಮತ್ತು 69 ರೂಪಾಯಿಗಳ ಎರಡೂ ಪ್ರಿಪೇಯ್ಡ್ ಯೋಜನೆಗಳನ್ನು ಬಂದ್ ಮಾಡಿದೆ. ಇಟಿ ವರದಿಯ ಪ್ರಕಾರ, ಕಂಪನಿಯು ಈ ಯೋಜನೆಯನ್ನು ವೆಬ್ಸೈಟ್‌ನಿಂದ ತೆಗೆದು ಹಾಕಿದೆ.
ಈ ಎರಡೂ ಯೋಜನೆಗಳು ಜಿಯೋಫೋನ್ ಬಳಕೆದಾರರಿಗೆ ಲಭ್ಯವಾಗ್ತಿತ್ತು. ಇವು ಅಲ್ಪಾವಧಿಯ ಯೋಜನೆಗಳಾಗಿದ್ದವು. ಈ ಪ್ಲಾನ್ ನಲ್ಲಿ ಡೇಟಾವನ್ನು ಸಹ ನೀಡಲಾಗ್ತಿತ್ತು. 69 ರೂಪಾಯಿಗಳ ಯೋಜನೆಯಲ್ಲಿ 14 ದಿನಗಳ ಮಾನ್ಯತೆಯನ್ನು ನೀಡಲಾಗ್ತಿತ್ತು.
69 ರ ಯೋಜನೆಯು 7 ಜಿಬಿ ಡೇಟಾವನ್ನು ಹೊಂದಿದ್ದು, 15 ಉಚಿತ ಎಸ್‌ಎಎಂ ಲಭ್ಯವಿತ್ತು. ಜಿಯೋದಿಂದ ಜಿಯೋಗೆ ಉಚಿತ ಕರೆ ಲಭ್ಯವಿತ್ತು. ಇನ್ನು 49 ರೂಪಾಯಿಗಳ ಯೋಜನೆಯ 14 ದಿನಗಳ ಮಾನ್ಯತೆಯನ್ನು ಹೊಂದಿದೆ. ಕೇವಲ 2 ಜಿಬಿ ಡೇಟಾ ಗ್ರಾಹಕರಿಗೆ ಲಭ್ಯವಿತ್ತು.