ದೇಶದಲ್ಲಿನ ಅಸಂಘಟಿತ ವಲಯದ ಕಾರ್ಮಿಕರ ಪೂರ್ಣ ಮಾಹಿತಿಯುಳ್ಳ ಡಾಟಾಬೇಸ್ ತಯಾರಿಸಲು ಮುಂದಾಗಿರುವ ಕೇಂದ್ರ ಕಾರ್ಮಿಕ ಸಚಿವಾಲಯದ ಪರಿಶ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ.
ಆ. 26ರಂದು ಜಾರಿಗೆ ಬಂದ ’ಇ-ಶ್ರಮ’ ವೆಬ್‌ಪೋರ್ಟಲ್‌ನಲ್ಲಿ ದೇಶಾದ್ಯಂತ 1 ಕೋಟಿಗೂ ಅಧಿಕ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ.
ಕೃಷಿ ವಲಯ, ನಿರ್ಮಾಣ, ಸಾರಿಗೆ, ಮೀನುಗಾರಿಕೆ, ಉತ್ಪಾದನೆ, ರಸ್ತೆ ಬದಿ ವ್ಯಾಪಾರ, ಮನೆಗೆಲಸ ಸೇರಿದಂತೆ ಹಲವು ವಲಯಗಳಲ್ಲಿನ ಕಾರ್ಮಿಕರು ತಮ್ಮ ಗುರುತನ್ನು ಕೇಂದ್ರ ಸರ್ಕಾರದ ದಾಖಲೆಗಳಲ್ಲಿ ಖಾತ್ರಿ ಆಗಿಸಿಕೊಳ್ಳಲು ನೋಂದಣಿ ಮಾಡಿಕೊಂಡಿದ್ದಾರೆ. ಭವಿಷ್ಯದಲ್ಲಿ ಈ ಕಾರ್ಮಿಕರಿಗೆ ಕೇಂದ್ರ ಸರ್ಕಾರವು ಹೊಸ ಯೋಜನೆ ಅಡಿಯಲ್ಲಿ ಸೌಲಭ್ಯ ಒದಗಿಸಲು ಈ ಪೋರ್ಟಲ್ ಬಹಳ ನೆರವಾಗಲಿದೆ.
ಜಾರಿಗೆ ಬಂದ 24 ದಿನಗಳಲ್ಲೇ 1 ಕೋಟಿ ಕಾರ್ಮಿಕರು ನೋಂದಣಿ ಆಗಿರುವುದು ಸಂತಸ ತಂದಿದೆ. ದೇಶದಲ್ಲಿಅಸಂಘಟಿತ ವಲಯದ 38 ಕೋಟಿ ಕಾರ್ಮಿಕರು ಇದ್ದಾರೆ ಎಂದು 2019-20ನೇ ಸಾಲಿನ ಆರ್ಥಿಕ ಸಮೀಕ್ಷೆ ಹೇಳಿದೆ. ಸಾಮಾಜಿಕ ಭದ್ರತೆ ಹಾಗೂ ವೃತ್ತಿ ಆಧರಿತ ಸೌಲಭ್ಯಗಳನ್ನು ಅವರಿಗೆ ಮುಟ್ಟಿಸಲು ಇ-ಶ್ರಮ ಪೋರ್ಟಲ್ ರಹದಾರಿ ಆಗಿದೆ ಎಂದು ಕಾರ್ಮಿಕ ಸಚಿವಾಲಯದ ಕಾರ್ಯದರ್ಶಿ ರಾಮೇಶ್ವರ ತೆಲಿ ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಘಟಕ ಬಂದ್ ಘೋಷಣೆ ನಡುವೆಯೂ ಚೆನ್ನೈನಲ್ಲಿ ಉತ್ಪಾದನೆ ಪುನಾರಂಭಿಸಿದ ಫೋರ್ಡ್
ಬಿಹಾರ, ಒಡಿಶಾ, ಉತ್ತರಪ್ರದೇಶ ಹಾಗೂ ಪಶ್ಚಿಮ ಬಂಗಾಳದಿಂದ ಅತಿಹೆಚ್ಚು ಕಾರ್ಮಿಕರು ವೆಬ್‌ಪೋರ್ಟಲ್‌ಗೆ ನೋಂದಣಿ ಮಾಡಿಸಿದ್ದಾರೆ ಎನ್ನಲಾಗಿದೆ.